ವಿಜ್ಞಾನ ಸೂರ್ಯರೊಡನೆ ಮೂರು ದಿನ

7:31 PM

ಕಳೆದ ವಾರಾಂತ್ಯದಲ್ಲಿ (ಫೆಬ್ರವರಿ ೮, ೯, ೧೦) ಗುಲ್ಬರ್ಗಾದಲ್ಲಿದ್ದೆ. ಕರ್ನಾಟಕ ಅನುವಾದ ಸಾಹಿತ್ಯ ಅಕಾಡೆಮಿ, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಹಾಗೂ ಗುಲ್ಬರ್ಗಾ ವಿವಿಯ ಸಹಭಾಗಿತ್ವದಲ್ಲಿ ಅಲ್ಲಿ ’ವೈಜ್ಞಾನಿಕ ಕೃತಿಗಳ ಅನುವಾದ ಕಾರ್ಯಾಗಾರ’ ಏರ್ಪಾಡಾಗಿತ್ತು.

ಶ್ರೀ ಕೊಳ್ಳೇಗಾಲ ಶರ್ಮರು ಜನವರಿಯಲ್ಲಿ ಫೋನ್ ಮಾಡಿ ಗುಲ್ಬರ್ಗದಲ್ಲಿ ಹೀಗೊಂದು ಕಾರ್ಯಕ್ರಮ ಇದೆ ಅಂದ ತಕ್ಷಣ ಹೊರಟಿದ್ದ ನನಗೆ ಆ ಕಾರ್ಯಕ್ರಮದ ಉದ್ದೇಶ, ಭಾಗವಹಿಸುವ ಇತರರ ಪರಿಚಯ, ಕೊನೆಗೆ ನಾನ್ಯಾಕೆ ಗುಲ್ಬರ್ಗಾಕ್ಕೆ ಹೊರಟಿದ್ದೇನೆ ಎಂಬ ಐಡಿಯಾ ಕೂಡ ಇರಲಿಲ್ಲ. ಆದರೆ ಈಗ, ಕಾರ್ಯಕ್ರಮ ಮುಗಿಸಿ ಬಂದ ಮೇಲೆ ಅಲ್ಲಿಗೆ ಹೊರಟಿದ್ದಕ್ಕಾಗಿ ನನ್ನ ಬೆನ್ನನ್ನು ನಾನೇ ತಟ್ಟಿಕೊಳ್ತಾ ಇದೀನಿ :-)

ಡಾ ಪಿ ಎಸ್ ಶಂಕರ್, ಶ್ರೀ ಅಡ್ಯನಡ್ಕ ಕೃಷ್ಣಭಟ್ ಹಾಗೂ ಶ್ರೀ ಟಿ ಆರ್ ಅನಂತರಾಮುರವರ ಪರಿಚಯವಾದದ್ದು ನನ್ನ ಮಟ್ಟಿಗೆ ಈ ಕಾರ್ಯಕ್ರಮದಿಂದ ಆದ ಅತ್ಯಂತ ದೊಡ್ಡ ಲಾಭ. ಶಾಸ್ತ್ರೀಜಿಯವರನ್ನು ನಾಲ್ಕೈದು ವರ್ಷಗಳ ನಂತರ ಮತ್ತೊಮ್ಮೆ ಭೇಟಿಯಾದದ್ದು ಇನ್ನೊಂದು ಸಂತೋಷದ ವಿಷಯ.

ಇಷ್ಟೆಲ್ಲ ಸಂತೋಷದಿಂದ ನಾನು ಕಳೆದ ಮೂರು ದಿನಗಳ ಕೆಲ ಛಾಯಾಚಿತ್ರಗಳು ಇಲ್ಲಿವೆ.

You Might Also Like

0 Responses

Popular Posts

Like us on Facebook