
೨೦೦೬ರ ಮಾರ್ಚ್ ೧೧ರಂದು ಬ್ಲಾಗಮಂಡಲಕ್ಕೆ ಬಂದ ಶ್ರೀನಿಧಿಯ ಪ್ರಪಂಚಕ್ಕೆ ನಿನ್ನೆ ಹ್ಯಾಪಿ ಬರ್ತ್ಡೇ ಹೇಳಬೇಕಿತ್ತು. ಆದರೆ ಯಥಾಪ್ರಕಾರ ನನಗೆ ಮರೆತುಹೋಯಿತು! :-)
ಶ್ರೀನಿಧಿಯ ಪ್ರಪಂಚಕ್ಕೆ ಬಿಲೇಟೆಡ್ ವಿಷಸ್! ಹಾಗೆಯೇ ಈ ಮೂರು ವರ್ಷಗಳಲ್ಲಿ ಶ್ರೀನಿಧಿಯ ಪ್ರಪಂಚದ ಭಾಗವೇ ಆಗಿಹೋಗಿರುವ ನಿಮಗೆಲ್ಲರಿಗೂ ಹೃತ್ಪೂರ್ವಕ ಥ್ಯಾಂಕ್ಸು!!
ನನ್ನ ಪ್ರಪಂಚದ ಕಡೆ ಹೀಗೆಯೇ ಬಂದು ಹೋಗುತ್ತಿರಿ.
ಪ್ರೀತಿಯಿಂದ,
ಶ್ರೀನಿಧಿ

ಶೇಷಾದ್ರಿ ರಸ್ತೆಯ ಕೇಂದ್ರ ಕಾರಾಗೃಹ ಬೆಂಗಳೂರಿನ ಪ್ರಮುಖ ಐತಿಹಾಸಿಕ ಸ್ಮಾರಕಗಳಲ್ಲೊಂದು. ಈಚಿನವರೆಗೂ ಅಲ್ಲಿದ್ದ ಬಂದೀಖಾನೆ ಪರಪ್ಪನ ಅಗ್ರಹಾರಕ್ಕೆ ಸ್ಥಳಾಂತರವಾದ ಮೇಲೆ ಹೊಸರೂಪ ಪಡೆದಿರುವ ಈ ಸ್ಮಾರಕ ಈಗ ಸ್ವಾತಂತ್ರ್ಯ ಉದ್ಯಾನವನವಾಗಿ ಬದಲಾಗಿದೆ. ಕಳೆದ ವಾರಾಂತ್ಯದಲ್ಲಿ ಬೆಂಗಳೂರಿನ ಈ ಹೊಚ್ಚಹೊಸ ಲ್ಯಾಂಡ್ಮಾರ್ಕ್ಗೆ ನೀಡಿದ ಅನಿರೀಕ್ಷಿತ ಭೇಟಿಯ ಸಂದರ್ಭದಲ್ಲಿ ನನ್ನ ಮೊಬೈಲಿನಿಂದ ತೆಗೆದ ಕೆಲ ಛಾಯಾಚಿತ್ರಗಳು ಮಾತಾಡುವ ಚಿತ್ರಗಳ ಈ ಕಂತಿನಲ್ಲಿ.
ನಾಗರಹೊಳೆ ಚಿಣ್ಣಪ್ಪ ಎಂದೇ ಹೆಸರಾಗಿರುವ ವನ್ಯಪ್ರೇಮಿ ಶ್ರೀ ಕೆ ಎಂ ಚಿಣ್ಣಪ್ಪನವರನ್ನು ಇದೇ ತಿಂಗಳ ಐದರಂದು ಸಿಎನ್ಎನ್ ಐಬಿಎನ್ ವಾಹಿನಿ ಮುಂಬೈನಲ್ಲಿ ಸನ್ಮಾನಿಸಲಿದೆ. ಅರಣ್ಯ ಹಾಗೂ ವನ್ಯಜೀವಿಗಳ ರಕ್ಷಣೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿರುವ ಈ ಹಿರಿಯ ಸೇನಾನಿಗೆ ಶ್ರೀನಿಧಿಯ ಪ್ರಪಂಚದಿಂದ ಗೌರವಪೂರ್ವಕ ಅಭಿನಂದನೆಗಳು.
ನೀವು ಚಿಣ್ಣಪ್ಪನವರ ಬಗ್ಗೆ ಕೇಳಿಲ್ಲದಿದ್ದರೆ ಅವರ ಹೋರಾಟದ ಬದುಕಿನ ಚಿತ್ರಣ 'ಕಾಡಿನೊಳಗೊಂದು ಜೀವ'ವನ್ನು ಒಮ್ಮೆ ಓದಿ.

