ಕನ್ನಡ ವ್ಯಾಕರಣ ಪ್ರವೇಶ - ಹೊಸ ಆವೃತ್ತಿ ಬರುತ್ತಿದೆ!

8:04 PM

ನನ್ನ ತಂದೆ ಶ್ರೀ ಟಿ ಎಸ್ ಗೋಪಾಲ್ ಅವರ 'ಕನ್ನಡ ವ್ಯಾಕರಣ ಪ್ರವೇಶ' ಇದೀಗ ಐದನೆಯ ಮುದ್ರಣ ಕಾಣುತ್ತಿದೆ. ಮೈಸೂರಿನ ಭಾರತೀ ಪ್ರಕಾಶನ ಪ್ರಕಟಿಸುತ್ತಿರುವ ಈ ಪುಸ್ತಕ ಸದ್ಯದಲ್ಲೇ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ. ಈ ಪುಸ್ತಕದ ಬಗ್ಗೆ ಹಿರಿಯ ವಿದ್ವಾಂಸ ಡಾ| ಎನ್ ಕೆ ರಾಮಶೇಷನ್ ಅವರು ವ್ಯಕ್ತಪಡಿಸಿರುವ ಅನಿಸಿಕೆಗಳು ಇಲ್ಲಿವೆ.

ಟಿ ಎಸ್ ಗೋಪಾಲರ 'ಕನ್ನಡ ವ್ಯಾಕರಣ ಪ್ರವೇಶ' ಪುಸ್ತಕವು ವಿದ್ಯಾರ್ಥಿ-ಅಧ್ಯಾಪಕ ಇಬ್ಬರಿಗೂ ನೆರವಾಗುತ್ತದೆ, ಓದಿಸಿಕೊಂಡು ಹೋಗುತ್ತದೆ. ಶಾಸ್ತ್ರವನ್ನು ಸುಲಭವಾಗಿ, ತಿಳಿಯಾಗಿ ನಿರೂಪಿಸಿ ಮನಮುಟ್ಟಿಸುವ ಕಲೆ ಗೋಪಾಲ್ ಅವರಿಗೆ ಹೃದ್ಗತವಾಗಿದೆ.

ಅಕ್ಷರಗಳಿಂದ ಪತ್ರಲೇಖನದ ತನಕ, ಗಾದೆಮಾತು-ಪ್ರಬಂಧ, ತತ್ಸಮ-ತದ್ಭವಗಳು, ನಾನಾರ್ಥ-ಸಮಾನಾರ್ಥ-ವಿರುದ್ಧಾರ್ಥ ಪದಗಳು, ನುಡಿಗಟ್ಟು - ಈ ಎಲ್ಲ ವಿವರಗಳನ್ನೂ ಎಳೆಎಳೆಯಾಗಿ ಹಂತಹಂತವಾಗಿ ನಿರೂಪಿಸಿರುವ ಈ ಪುಸ್ತಕವು ವಿದ್ಯಾರ್ಥಿ-ಅಧ್ಯಾಪಕರಿಗೆ ಕೇವಲ ಕಲಿಕೆಗಷ್ಟೇ ಅಲ್ಲ , ಒಂದು ಆಕರ-ಮಾದರಿಯಾಗಿ ಬಹುಕಾಲ ಉಳಿಯುವ ಕೃತಿಯಾಗಿದೆ.

ಪೂಜ್ಯ ಡಿಎಲ್‌ಎನ್ ಅವರ 'ಶಬ್ದವಿಹಾರ', ತೀನಂಶ್ರೀ ಅವರ 'ಕನ್ನಡ ಮಧ್ಯಮ ವ್ಯಾಕರಣ' ಇವೆಲ್ಲದರ ಗುಣ, ಆಂತರಿಕ ಸ್ವಾರಸ್ಯ 'ಕನ್ನಡ ವ್ಯಾಕರಣ ಪ್ರವೇಶ'ದಲ್ಲಿ ಸ್ಪಷ್ಟವಾಗಿ ಕಾಣುತ್ತದೆ. ಗೋಪಾಲರಿಂದ ಇಂಥ ಉಪಯುಕ್ತ ಆಕರ ಗ್ರಂಥಗಳು ಹೀಗೆಯೇ ಮೂಡಿಬರಲೆಂದು ಹಾರೈಸುತ್ತೇನೆ.

- ಡಾ| ಎನ್ ಕೆ ರಾಮಶೇಷನ್, ಮೈಸೂರು

ಇದೇ ಪುಸ್ತಕದ ಬಗ್ಗೆ ಬೇದ್ರೆ ಮಂಜುನಾಥರೂ ತಮ್ಮ ಬ್ಲಾಗಿನಲ್ಲಿ ಬರೆದಿದ್ದಾರೆ.

You Might Also Like

1 Responses

Popular Posts

Like us on Facebook