ತಿನ್ನಲಾಗದ ಬಿಸ್ಕತ್ತು, ನುಂಗಲಾಗದ ಟ್ಯಾಬ್ಲೆಟ್ಟು

11:47 AM


ನನ್ನ ಹೊಸ ಪುಸ್ತಕ 'ತಿನ್ನಲಾಗದ ಬಿಸ್ಕತ್ತು, ನುಂಗಲಾಗದ ಟ್ಯಾಬ್ಲೆಟ್ಟು' ಬರುವ ನವೆಂಬರ್ ೬ರ ಸಂಜೆ ಬೆಂಗಳೂರಿನಲ್ಲಿ ಬಿಡುಗಡೆಯಾಗಲಿದೆ. ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನಡೆಯಲಿರುವ ಈ ಕಾರ್ಯಕ್ರಮಕ್ಕೆ ನಿಮಗೆ ಆದರದ ಸ್ವಾಗತ. ಹಿರಿಯ ಭಾಷಾತಜ್ಞರಾದ ಪ್ರೊ. ಜಿ. ವೆಂಕಟಸುಬ್ಬಯ್ಯ ಹಾಗೂ ಖ್ಯಾತ ಚಲನಚಿತ್ರ ನಿರ್ದೇಶಕ ಶ್ರೀ ಗುರುಪ್ರಸಾದ್ ಅಂದು ನಮ್ಮೊಡನೆ ಇರಲಿದ್ದಾರೆ.

ಪುಸ್ತಕದ ಮುಂಗಡ ಬುಕಿಂಗ್ www.akrutibooks.com ತಾಣದಲ್ಲಿ ಪ್ರಾರಂಭವಾಗಿದೆ. ಬುಕಿಂಗ್ ದೃಢೀಕರಣ ಇಮೇಲ್‌ನ ಮುದ್ರಿತ ಪ್ರತಿ ತಂದು ಕಾರ್ಯಕ್ರಮದ ದಿನ ನಿಮ್ಮ ಪ್ರತಿಯನ್ನು ಪಡೆದುಕೊಳ್ಳಬಹುದು. ಕಾರ್ಯಕ್ರಮಕ್ಕೆ ಬರಲು ಸಾಧ್ಯವಾಗದವರ ಪ್ರತಿಗಳನ್ನು ಅಂಚೆ/ಕೊರಿಯರ್ ಮೂಲಕ ಕಳುಹಿಸಿಕೊಡಲಾಗುವುದು. ಅಂಚೆ ವೆಚ್ಚ ನಮ್ಮದೇ!

ಸರಳ ಶೈಲಿಯ ಬರೆವಣಿಗೆ ಜೊತೆಗೆ ಜಿ. ಎಸ್. ನಾಗನಾಥ್ ಅವರ ಕಾರ್ಟೂನುಗಳು ಈ ಪುಸ್ತಕವನ್ನು ಇನ್ನಷ್ಟು ಆಕರ್ಷಕಗೊಳಿಸಿವೆ.ಕೆಲ ಅಭಿಪ್ರಾಯಗಳು ಇಲ್ಲಿವೆ ನೋಡಿ!

"ಮನೆಮನೆಗಳನ್ನು ವ್ಯಾಪಿಸಿರುವ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಆಗುಹೋಗುಗಳ ಬಗ್ಗೆ ಕನ್ನಡದಲ್ಲಿ ಮಾಹಿತಿಯನ್ನು ಜನರಿಗೆ ತಲುಪಿಸುತ್ತಿರುವ ಬೆರಳೆಣಿಕೆಯಷ್ಟು ಮಂದಿಯಲ್ಲಿ ಟಿ. ಜಿ. ಶ್ರೀನಿಧಿ ಒಂದು ಪ್ರಮುಖ ಹೆಸರು."
- ಡಾ| ಯು. ಬಿ. ಪವನಜ

"ಶ್ರೀನಿಧಿಯದು ಎತ್ತರದ ಸ್ಥಾನದಿಂದ ತನ್ನ ತಿಳುವಳಿಕೆಯ ಹಮ್ಮುಬಿಮ್ಮನ್ನು ಬಿತ್ತರಿಸುವ ಧಾಟಿಯಲ್ಲ. ಈತ ನಮ್ಮವನೇ, ನಮಗೆ ಅರ್ಥವಾಗುವ ರೀತಿಯಲ್ಲೇ ಮಾತನಾಡುವವನು ಅಂತನಿಸುವ ಶೈಲಿ."
- ಶ್ರೀವತ್ಸ ಜೋಶಿ

"ನಮ್ಮನ್ನು ಆವರಿಸಿಕೊಂಡಿರುವ ಅಂತರಜಾಲದ ಇಂದ್ರಜಾಲವನ್ನು ಅರಿಯುವ ಬಗೆ, ಬಳಸುವ ದಾರಿ ಇಲ್ಲಿದೆ. ತಿಳಿಗನ್ನಡದಲ್ಲೇ ಅಂತರಜಾಲದ ಗುಟ್ಟು ಅರಿಯಲು ಮಕ್ಕಳು, ಹಿರಿಯರಿಗೆ ಇದೊಂದು ಮರೆಯಲಾಗದ ಪುಸ್ತಕ!"
- ಬೇಳೂರು ಸುದರ್ಶನ

"ಇದು ತಲೆ ಚಿಟ್ಟು ಹಿಡಿಸುವ ಪಾರಿಭಾಷಿಕಗಳ ಭಾರದಿಂದ ನಲುಗಿಲ್ಲ. ಅರ್ಥವಾಗದ ಅನುವಾದಗಳ ಮೂಲಕ ಹುಸಿ ಗಾಂಭೀರ್ಯ ನಟಿಸುತ್ತಿಲ್ಲ. ಇದನ್ನು ಓದುವುದಕ್ಕೆ ಯಾವ ಪೂರ್ವ ಪರಿಚಯಗಳ ಅಗತ್ಯವೂ ಇಲ್ಲ."
- ಎನ್. ಎ. ಎಂ. ಇಸ್ಮಾಯಿಲ್

"ಇದು ಇರಬೇಕಾದ್ದು ಕಪಾಟಿನಲ್ಲಲ್ಲ; ಕೀಲಿಮಣೆಯ ಪಕ್ಕದಲ್ಲಿ. 'ತಿನ್ನಲಾಗದ ಬಿಸ್ಕತ್ತು, ನುಂಗಲಾಗದ ಟ್ಯಾಬ್ಲೆಟ್ಟು' ನಿಮ್ಮ ಆಪ್ತಮಿತ್ರ."
- ಟಿ. ಆರ್. ಅನಂತರಾಮು

You Might Also Like

0 Responses

Popular Posts

Like us on Facebook