ಕ್ರೆಡಿಟ್ ಕಾರ್ಡ್ ಮತ್ತು ಕಾಗದ

12:15 AM


ಕ್ರೆಡಿಟ್ ಕಾರ್ಡು - ಡೆಬಿಟ್ ಕಾರ್ಡುಗಳ ಬಳಕೆ ಜಾಸ್ತಿಯಾದಂತೆ ನಮ್ಮ ಪರ್ಸಿನಲ್ಲಿ ಕಾರ್ಡಿನ ರಸೀತಿಗಳ (ಚಾರ್ಜ್ ಸ್ಲಿಪ್) ಸಂಖ್ಯೆಯೂ ಜಾಸ್ತಿಯಾಗುತ್ತಿದೆ. ತಮಾಷೆಯ ವಿಷಯವೆಂದರೆ ಕಾರ್ಡ್ ಉಜ್ಜಿದ ತಕ್ಷಣ ಮೊಬೈಲಿನಲ್ಲಿ ಎಸ್ಸೆಮ್ಮೆಸ್ ಸಂದೇಶ ಬಂದುಬಿಡುವುದರಿಂದ ಬಹಳಷ್ಟು ಸನ್ನಿವೇಶಗಳಲ್ಲಿ ನಮಗೆ ಈ ಕಾಗದದ ಚೂರಿನ ಅಗತ್ಯವೇ ಇಲ್ಲ. ಒಂದು ಚಾರ್ಜ್ ಸ್ಲಿಪ್ ಸುಮಾರು ೫೦ ಚದರ ಸೆಂಟೀಮೀಟರ್ ಕಾಗದ ಬಳಸುತ್ತದೆ ಎಂದಿಟ್ಟುಕೊಂಡರೆ ಅದು ನಮಗೆ ಬೇಡವೆಂದು ಹೇಳುವ ಮೂಲಕ ಎಷ್ಟು ಕಸ ಉತ್ಪಾದನೆಯಾಗುವುದನ್ನು ತಡೆಯುತ್ತಿದ್ದೇವೆ, ಎಷ್ಟು ಕಾಗದ ಉಳಿಸುತ್ತಿದ್ದೇವೆ ಒಮ್ಮೆ ಯೋಚಿಸಿ. ಕಾರ್ಡ್ ಉಜ್ಜುವಾಗಲೆಲ್ಲ "ಚಾರ್ಜ್ ಸ್ಲಿಪ್ ಪ್ರತಿ ನನಗೆ ಬೇಡ" ಎಂದು ಅಂಗಡಿಯವರಿಗೆ ಹೇಳುವುದನ್ನೂ ಮರೆಯಬೇಡಿ!

ಇನ್ನಷ್ಟು:
  • ಒಂದು ಚೂರು ಕಾಗದಕ್ಕೆ ಇಷ್ಟೆಲ್ಲ ತಲೆಬಿಸಿ ಯಾಕೆ ಎನ್ನುವವರಿಗೆ: ಮಾರ್ಚ್ ೨೦೧೬ ಒಂದೇ ತಿಂಗಳ ಅಂಕಿ ಅಂಶಗಳ ಪ್ರಕಾರ ನಮ್ಮ ದೇಶದಲ್ಲಿ ೧೮.೫ ಕೋಟಿಯಷ್ಟು ಕ್ರೆಡಿಟ್ ಕಾರ್ಡ್ / ಡೆಬಿಟ್ ಕಾರ್ಡ್ 'ಪಾಯಿಂಟ್ ಆಫ್ ಸೇಲ್' ವಹಿವಾಟುಗಳು ದಾಖಲಾಗಿವೆ (ಆಕರ: https://www.rbi.org.in/scripts/ATMView.aspx). ಇದರಲ್ಲಿ ಕೇವಲ ಅರ್ಧದಷ್ಟು ಸನ್ನಿವೇಶಗಳಲ್ಲಿ ಗ್ರಾಹಕರು ಚಾರ್ಜ್ ಸ್ಲಿಪ್ ಪಡೆದಿದ್ದರೂ ಎಷ್ಟು ಕಾಗದ ಬಳಕೆಯಾಗಿರಬಹುದು?  
  • ಕಚೇರಿಯ ದಾಖಲೆ ಇತ್ಯಾದಿಗಾಗಿ ನಿಮಗೆ ಚಾರ್ಜ್ ಸ್ಲಿಪ್ ಬೇಕಾದ ಸನ್ನಿವೇಶಗಳಲ್ಲಿ ಈ ಸಲಹೆ ಅನ್ವಯವಾಗುವುದಿಲ್ಲ :)

You Might Also Like

0 Responses

Popular Posts

Like us on Facebook