ಹೊಸ ಪುಸ್ತಕ ಬರ್ತಾ ಇದೆ!!!
9:12 PMವಿಶ್ವವಿಖ್ಯಾತ ವನ್ಯಜೀವಿ ವಿಜ್ಞಾನಿ ಡಾ ಕೆ ಉಲ್ಲಾಸ ಕಾರಂತರ ಅನುಭವಗಳನ್ನು ಆಧರಿಸಿದ ಪುಸ್ತಕ 'ಹುಲಿರಾಯನ ಆಕಾಶವಾಣಿ' ಇದೇ ತಿಂಗಳ ೧೭ರಂದು ಬೆಂಗಳೂರಿನಲ್ಲಿ ಬಿಡುಗಡೆಯಾಗಲಿದೆ. ನವಕರ್ನಾಟಕ ಪ್ರಕಾಶನ ಪ್ರಕಟಿಸುತ್ತಿರುವ ಈ ಪುಸ್ತಕದಲ್ಲಿ ಕಾರಂತರ ಅನುಭವಗಳನ್ನು ಬರಹದ ರೂಪಕ್ಕಿಳಿಸಿರುವವರು ಶ್ರೀ ಟಿ ಎಸ್ ಗೋಪಾಲ್, ನನ್ನ ಅಪ್ಪ!
ಈ ಪುಸ್ತಕದ ಆಯ್ದ ಭಾಗಗಳು ವಿಜಯ ಕರ್ನಾಟಕದ ಸಾಪ್ತಾಹಿಕ ವಿಜಯದಲ್ಲಿ ಹಾಗೂ ಆಕಾಶವಾಣಿಯ ಮುಖಾಂತರ ಈಗಾಗಲೇ ಪ್ರಸಾರವಾಗುತ್ತಿವೆ. ಈವರೆಗೂ ನೋಡಿಲ್ಲದಿದ್ದರೆ ಮುಂದಿನ ಭಾನುವಾರದ ವಿಜಯ ಕರ್ನಾಟಕ ನೋಡಿ, ಅಥವಾ ಮಾರನೆಯ ದಿನ ಬೆಳಿಗ್ಗೆ ಆಕಾಶವಾಣಿ ಪ್ರಸಾರವನ್ನು ಕೇಳಿ! ಜೊತೆಗೆ ಮುಂದಿನ ವಾರ ಪುಸ್ತಕ ಹೊರಬಂದ ಮೇಲೆ ನಿಮ್ಮೂರಿನ ನವಕರ್ನಾಟಕಕ್ಕೊಂದು ಸಲ ಭೇಟಿಕೊಡಿ :)
0 Responses