ನಾನೂ ಹಂಪೆಗೆ ಹೋಗಿದ್ದೆ!

12:36 PM

ಹಂಪೆಯ ಕನ್ನಡ ವಿಶ್ವವಿದ್ಯಾಲಯಕ್ಕೆ ಭೇಟಿಕೊಡಲು ಮೊದಲ ಅವಕಾಶ ನಿನ್ನೆ-ಮೊನ್ನೆ (೧೮ ಹಾಗೂ ೧೯ ಸೆಪ್ಟೆಂಬರ್) ಒದಗಿಬಂದಿತ್ತು. ವಿಶ್ವವಿದ್ಯಾಲಯದ ದೂರಶಿಕ್ಷಣ ಕೇಂದ್ರ ಪ್ರಾರಂಭಿಸಿರುವ ಮಾಹಿತಿ ಸಂವಹನ ಮತ್ತು ತಂತ್ರಜ್ಞಾನ ಡಿಪ್ಲೊಮಾ ಕಾರ್ಯಕ್ರಮದ ಸಂಪರ್ಕ ತರಗತಿಗಳ ಕೊನೆಯ ಎರಡು ದಿನ ನಾನು ಒಬ್ಬ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದೆ.

ಮೊದಲ ಬಾರಿಗೆ ಏಸಿ ೨-ಟಿಯರ್ ರೈಲುಪ್ರಯಾಣ, ಹೊಸಪೇಟೆಯಲ್ಲಿ ಅಪರೂಪಕ್ಕೆ ಹಿಡಿದುಕೊಂಡಿದ್ದ ಜಡಿಮಳೆ, "ಕೋಡಿಬಿದ್ದಿದ್ದ" ಕಮಲಾಪುರ ಕೆರೆ, ವಿಶ್ವವಿದ್ಯಾಲಯದ ಸುಂದರ ಆವರಣ ಹಾಗೂ ಸ್ನೇಹಪರ ಸಿಬ್ಬಂದಿವರ್ಗ, ವಿದ್ಯಾರ್ಥಿಗಳ ಉತ್ಸಾಹ ಇವೆಲ್ಲವೂ ನನ್ನ ಎರಡು ದಿನಗಳ ಪ್ರವಾಸವನ್ನು ಅತ್ಯಂತ ಸ್ಮರಣೀಯವನ್ನಾಗಿಸಿದವು. ಇಷ್ಟು ಸಾಲದು ಅಂತ ಈ ಕಾರ್ಯಕ್ರಮಕ್ಕಾಗಿ ನಾನು ಸಿದ್ಧಪಡಿಸಿದ್ದ ಮೈಕ್ರೋಸಾಫ್ಟ್ ಆಫೀಸ್ ೨೦೦೩ ಕುರಿತ ಪಠ್ಯಸಾಮಗ್ರಿಯನ್ನು ವಿಶ್ವವಿದ್ಯಾಲಯದ ದೂರಶಿಕ್ಷಣ ಕೇಂದ್ರ ಪುಸ್ತಕರೂಪದಲ್ಲೂ ಹೊರತರಲಿದೆಯಂತೆ!


You Might Also Like

0 Responses

Popular Posts

Like us on Facebook