ಅಪರೂಪದ ಪುಸ್ತಕ: 'ಗಣಕದ ಕಥೆ'
10:33 PM
ಕನ್ನಡದಲ್ಲಿ ಮಾಹಿತಿ ತಂತ್ರಜ್ಞಾನ ಕುರಿತ ಬರವಣಿಗೆ ಎಂದ ತಕ್ಷಣ ವಿಭಿನ್ನ ಪ್ರತಿಕ್ರಿಯೆಗಳು ಕೇಳಸಿಗುತ್ತವೆ - "ಬಹಳ ಒಳ್ಳೆಯದು, ಕನ್ನಡ ಮಾಧ್ಯಮದಲ್ಲೇ ವಿವರಿಸುವುದರಿಂದ ಕಲಿಕೆ ಬಹಳ ಸುಲಭವಾಗುತ್ತದೆ" ಎನ್ನುವ ಪ್ರೋತ್ಸಾಹದಿಂದ ಹಿಡಿದು "ಕಂಪ್ಯೂಟರ್ ಬಗ್ಗೆ ಕನ್ನಡದಲ್ಲಿ ಬರೆದರೆ ಅದನ್ಯಾರ್‍ರೀ ಓದ್ತಾರೆ?" ಎನ್ನುವ ಕೊಂಕುನುಡಿಯವರೆಗೆ ಇಂತಹ ಪ್ರತಿಕ್ರಿಯೆಗಳಲ್ಲಿ ಅನೇಕ ಬಗೆ.
ಮಾಹಿತಿ ತಂತ್ರಜ್ಞಾನ ನಮ್ಮ ಜೀವನದ ಅವಿಭಾಜ್ಯ ಅಂಗವೇ ಆಗಿಹೋಗಿರುವ ಇಂದಿನ ಕಾಲದಲ್ಲೂ ಅದರ ಬಗೆಗೆ ಕನ್ನಡದಲ್ಲಿ ಬರೆಯುವ ಕುರಿತು ಇಂತಹ ವಿಭಿನ್ನ ಅಭಿಪ್ರಾಯಗಳಿವೆ ಎನ್ನುವುದಾದರೆ ಮೂರು ದಶಕಗಳ ಹಿಂದಿನ ಪರಿಸ್ಥಿತಿ ಹೇಗಿದ್ದಿರಬಹುದು?
೧೯೮೦ರ ದಶಕದಲ್ಲಿ ಕಂಪ್ಯೂಟರುಗಳೇ ಅಪರೂಪವಾಗಿದ್ದವು, ಇನ್ನು ಅದರ ಬಗೆಗೆ ಕನ್ನಡದಲ್ಲಿ ಓದುವವರ ಕತೆ ಹಾಗಿರಲಿ, ಬರೆಯುವವರಾದರೂ ಯಾರಿದ್ದರು ಎನ್ನುತ್ತೀರಾ?
ಖಂಡಿತಾ ಇದ್ದರು. ಅಂತಿಂಥವರಲ್ಲ, ಅತ್ಯುತ್ತಮ ಲೇಖಕರೇ ಇದ್ದರು.
ಅಂತಹವರಲ್ಲೊಬ್ಬರು ದಿವಂಗತ ಡಾ|| ನಳಿನಿ ಮೂರ್ತಿ. ಕನ್ನಡದಲ್ಲಿ ಕಂಪ್ಯೂಟರುಗಳ ಬಗೆಗೆ ಬರೆದ ಮೊದಲಿಗರಲ್ಲಿ ಅವರದು ಪ್ರಮುಖ ಹೆಸರು.
ಡಾ|| ನಳಿನಿ ಮೂರ್ತಿಯವರು ಓದಿದ್ದು ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ. ಅಲ್ಲಿ ಗಣಿತದಲ್ಲಿ ಎಂಎಸ್‌ಸಿ ಪದವಿಯನ್ನು ಚಿನ್ನದ ಪದಕದೊಡನೆ ಗಳಿಸಿದ ಅವರು ಭಾರತೀಯ ವಿಜ್ಞಾನಮಂದಿರ, ಮ್ಯಾಂಚೆಸ್ಟರ್ ವಿಶ್ವವಿದ್ಯಾಲಯ ಹಾಗೂ ಕೆನಡಾದ ನೋವಾಸ್ಕೋಶಿಯ ಟೆಕ್ನಿಕಲ್ ಕಾಲೇಜುಗಳಲ್ಲಿ ಉನ್ನತ ಅಧ್ಯಯನ ಕೈಗೊಂಡರು; ವಿಶ್ವದ ಹಲವೆಡೆಗಳಲ್ಲಿ ವಿಜ್ಞಾನಿಯಾಗಿ, ಪ್ರಾಧ್ಯಾಪಕರಾಗಿ ಸೇವೆಸಲ್ಲಿಸಿದರು.
ಮೈಸೂರಿನ ಪುಸ್ತಕ ಚಿಲುಮೆ ಪ್ರಕಾಶನದಿಂದ ೧೯೮೦ರಲ್ಲಿ ಪ್ರಕಟವಾದ ಅವರ 'ಗಣಕದ ಕಥೆ' ಪುಸ್ತಕ, ಕನ್ನಡದಲ್ಲಿ ಮಾಹಿತಿ ತಂತ್ರಜ್ಞಾನ ಬರವಣಿಗೆ ಹೇಗಿರಬೇಕು ಎನ್ನುವುದಕ್ಕೆ ಒಂದು ಉತ್ತಮ ಉದಾಹರಣೆ.
ಕಂಪ್ಯೂಟರಿನ ಪರಿಚಯ, ಇತಿಹಾಸ ಮುಂತಾದ ವಿಷಯಗಳಷ್ಟೆ ಅಲ್ಲ, ಈ ಕೃತಿಯಲ್ಲಿ ಕಂಪ್ಯೂಟರುಗಳ ಆಂತರಿಕ ಕಾರ್ಯಾಚರಣೆ ಹಾಗೂ ಕ್ರಮವಿಧಿ ರಚನೆಯಂತಹ ಕ್ಲಿಷ್ಟವೆನಿಸುವ ವಿಷಯಗಳನ್ನು ಕೂಡ ಮಕ್ಕಳಿಗೂ ಅರ್ಥವಾಗುವಷ್ಟು ಸರಳವಾಗಿ ವಿವರಿಸಲಾಗಿದೆ.
ಸದ್ಯ ಈ ಪುಸ್ತಕ ಮಾರುಕಟ್ಟೆಯಲ್ಲಿಲ್ಲದಿರುವುದು ಬೇಸರದ ಸಂಗತಿ. ಮೊದಲ ಮುದ್ರಣದ ಪ್ರತಿಗಳು ಮೈಸೂರು ವಿವಿ, ಕನ್ನಡ ಸಾಹಿತ್ಯ ಪರಿಷತ್ತು ಮೊದಲಾದ ಸಂಸ್ಥೆಗಳ ಗ್ರಂಥಾಲಯಗಳಲ್ಲಿ ಸಿಗಬಹುದು. ಆಸಕ್ತರು ಪ್ರಯತ್ನಿಸಿನೋಡಿ!

ಈ ಪುಸ್ತಕದ ಆಯ್ದ ಒಂದು ಅಧ್ಯಾಯವನ್ನು ಇಜ್ಞಾನ ಡಾಟ್ ಕಾಮ್ ಪ್ರಾಯೋಗಿಕವಾಗಿ ಹೊರತಂದ ಮಾಹಿತಿ ತಂತ್ರಜ್ಞಾನ ಸಂಚಿಕೆಯಲ್ಲಿ ಪ್ರಕಟಿಸಲಾಗಿತ್ತು.
0 Responses