ನನ್ನ ಪುಸ್ತಕಗಳು

12:28 PM

ನನ್ನ ಮೊದಲ ಪುಸ್ತಕ ’ಹಾರುವ ಕನಸನು ಕಂಡವರು’, ನಾನು ಇಂಜಿನಿಯರಿಂಗ್ ಅಂತಿಮವರ್ಷದಲ್ಲಿದ್ದಾಗ ಪ್ರಕಟವಾಯಿತು. ಮೊದಲ ವಿಮಾನ ಹಾರಾಟದ ಶತಮಾನೋತ್ಸವ ಸಂದರ್ಭದಲ್ಲಿ ಪ್ರಕಟವಾದ ಪುಸ್ತಕ ಇದು.
ಮೊದಲ ವಿಮಾನಯಾನಿಗಳೆಂದು ಗುರುತಿಸಲ್ಪಡುವ ರೈಟ್ ಸಹೋದರರಿಗೂ ಮೊದಲು ಹಾರುವ ಕನಸು ಕಂಡ ಕನಸುಗಾರರನ್ನು, ಅವರ ಪ್ರಯತ್ನಗಳನ್ನು ಈ ಪುಸ್ತಕ ಪರಿಚಯಿಸುತ್ತದೆ. ರೈಟ್ ಸಹೋದರರಿಗೂ ಮುನ್ನ ನ್ಯೂಜಿಲೆಂಡಿನ ಅಜ್ಞಾತ ವ್ಯಕ್ತಿಯೊಬ್ಬ ವಿಮಾನ ತಯಾರಿಸಿ ಹಾರಾಡುವಲ್ಲಿ ಯಶಸ್ವಿಯಾಗಿದ್ದನೆ ಎನ್ನುವ ಪ್ರಶ್ನೆಯತ್ತ ಗಮನಹರಿಸಿರುವುದು ಈ ಪುಟ್ಟ ಪುಸ್ತಕದ ಹೈಲೈಟ್. ಮೈಸೂರಿನ ಭಾರತೀ ಪ್ರಕಾಶನ ಪ್ರಕಟಿಸಿರುವ ಈ ಪುಸ್ತಕದ ಬೆಲೆ ಇಪ್ಪತ್ತು ರೂಪಾಯಿಗಳು.

೨೦೦೫ರಲ್ಲಿ ಪ್ರಕಟವಾದ ನನ್ನ ಎರಡನೆಯ ಪುಸ್ತಕ ’ಅಂತರಿಕ್ಷದ ಅದ್ಭುತಗಳು’. ಬಾಹ್ಯಾಕಾಶದ ಕುರಿತಾದ ಕುತೂಹಲಕಾರಿ ಬರಹಗಳ ಸಂಗ್ರಹವಾದ ಈ ಪುಸ್ತಕ ಭಾರತೀಯ ಭಾಷಾ ಸಂಸ್ಥಾನದ ಹಣಕಾಸು ನೆರವು ಯೋಜನೆಗೆ ಆಯ್ಕೆಯಾದದ್ದು ವಿಶೇಷ. ಅಂತರಿಕ್ಷದ ರೋಚಕತೆ ಹಾಗೂ ಅಲ್ಲಿ ಮಾನವನ ಸಾಧನೆಗಳನ್ನು ಬಿಡಿಬರಹಗಳ ರೂಪದಲ್ಲಿ ಈ ಪುಸ್ತಕ ನಿಮ್ಮ ಮುಂದಿಡುತ್ತದೆ.

ಈ ಪುಸ್ತಕದ ಬೆಲೆ ನಲುವತ್ತಮೂರು ರೂಪಾಯಿಗಳು.
ಪ್ರತಿಗಳಿಗಾಗಿ ಸಂಪರ್ಕಿಸಬೇಕಾದ ವಿಳಾಸ: srimysore at gmail dot com

You Might Also Like

1 Responses

Popular Posts

Like us on Facebook