ಇ ಆರ್ ಪಿ ಲೋಕ
10:07 PMಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ 'ವಿಜ್ಞಾನ ಲೋಕ' ಪತ್ರಿಕೆ ಮೇ ೨೦೦೯ರ ಸಂಚಿಕೆಯಲ್ಲಿ ಪ್ರಕಟವಾಗಿರುವ ಲೇಖನ
ನಿಮ್ಮ ಮನೆ ಬೀದಿಯಲ್ಲೊಂದು ದಿನಸಿ ಅಂಗಡಿ. ಅಂಥ ದೊಡ್ಡದೇನಲ್ಲ. ಮಂಡಿಯಿಂದ ಸಾಮಾನು ತರುವುದು, ಅಂಗಡಿಯಲ್ಲಿ ಕೂತು ಮಾರುವುದು, ಮನೆಗೆ ಹೋಗುತ್ತ ದಾರಿಯಲ್ಲಿ ಮನೆಮನೆಗೆ ದಿನಸಿ ತಲುಪಿಸುವುದು ಎಲ್ಲವನ್ನೂ ಆ ಅಂಗಡಿಯ ಮಾಲಿಕ ರಾಮಚಂದ್ರನೇ ಮಾಡುತ್ತಾನೆ. ಹೋದವಾರ ಮಂಡಿಯಲ್ಲಿ ತಂದ ವಸ್ತುಗಳ ರಸೀತಿ, ಮುಂದಿನವಾರ ತರಬೇಕಾದ ವಸ್ತುಗಳ ಪಟ್ಟಿ, ಮೂಲೆಮನೆಯ ನಂಜಮ್ಮಜ್ಜಿ ಕೊಟ್ಟಿರುವ ಸಾಮಾನುಚೀಟಿ, ಸಾಲಗಾರರು ಕೊಡಬೇಕಾದ ಬಾಕಿಯ ಲೆಕ್ಕ ಇವನ್ನೆಲ್ಲ ಸದಾಕಾಲವೂ ಜೇಬಿನಲ್ಲಿಟ್ಟುಕೊಂಡಿರುತ್ತಾನೆ. ಆ ಚೀಟಿಗಳ ಆಧಾರದ ಮೇಲೆಯೇ ಅವನ ವ್ಯವಹಾರವೆಲ್ಲ ನಡೆದುಕೊಂಡುಹೋಗುತ್ತಿರುತ್ತದೆ. ಅಕ್ಕಿಚೀಲದ ತಳ ಕಾಣಿಸುತ್ತಿದ್ದರೆ, ಕೃಷ್ಣಪ್ಪನವರು ಕೇಳಿದ ಕೊಬ್ಬರಿಎಣ್ಣೆ ಮುಗಿದುಹೋಗಿದ್ದರೆ ಅವೆಲ್ಲ ತಕ್ಷಣವೇ ರಾಮಚಂದ್ರನ ಚೀಟಿಗೆ ದಾಖಲಾಗುತ್ತವೆ.
ಸಣ್ಣಪ್ರಮಾಣದ ವಹಿವಾಟು ನಡೆಸುವ ರಾಮಚಂದ್ರನ ದಿನಸಿ ಅಂಗಡಿಗೆ ಈ ಚೀಟಿ ವ್ಯವಸ್ಥೆ ಸಾಕಾಗಬಹುದು. ಆದರೆ ನಾಲ್ಕಾರು ಕಾರ್ಖಾನೆ, ಹತ್ತಾರು ಕಚೇರಿ ಜೊತೆಗೆ ಸಾವಿರಾರು ಸಿಬ್ಬಂದಿ ಹಾಗೂ ಗ್ರಾಹಕರನ್ನು ಹೊಂದಿರುವ ದೊಡ್ಡ ಸಂಸ್ಥೆಯೊಂದು ಇದೇ ರೀತಿಯಲ್ಲಿ ವ್ಯವಹಾರ ಮಾಡಲು ಹೋದರೆ ಏನಾಗಬಹುದು ಯೋಚಿಸಿದ್ದೀರಾ?
ಮುಂದೆ ಓದಿ...
0 Responses