ನಮ್ಮ ಸಂಸ್ಕೃತಿ ನಮ್ಮ ಹೆಮ್ಮೆಯಾಗಲಿ!

4:00 PM

"ಮರಿದುಂಬಿಯಾಗಿ ಮೇಣ್ ಕೋಗಿಲೆಯಾಗಿ
ಪುಟ್ಟುವುದು ನಂದನದೊಳ್
ಬನವಾಸಿ ದೇಶದೊಳ್"

ಸಂಸ್ಕೃತಿ ಸಂಪನ್ನ ಮನುಷ್ಯನಾಗಿ ಹುಟ್ಟಿದರೆ ಬನವಾಸಿ ದೇಶದಲ್ಲೇ [ಕನ್ನಡ ನಾಡಿನಲ್ಲೇ] ಹುಟ್ಟಬೇಕು; ಒಂದು ವೇಳೆ ಆಗದಿದ್ದರೆ ಅಲ್ಲಿ ಕೊನೆಯ ಪಕ್ಷ ಕೋಗಿಲೆಯಾಗಿಯಾದರೂ ಮರಿ ದುಂಬಿಯಾಗಿಯಾದರೂ ಹುಟ್ಟಬೇಕು ಎಂದು ಪಂಪನನ್ನು ಉದ್ಗರಿಸುವಂತೆ ಮಾಡಿದ್ದು ನಮ್ಮ ಕನ್ನಡ ಸಂಸ್ಕೃತಿ. ಇಂತಹ ಹಿರಿಮೆಯ ನಮ್ಮ ಸಂಸ್ಕೃತಿ ನಮ್ಮ ಹೆಮ್ಮೆಯಾಗಿರಬೇಕಾದದ್ದು ಇಂದು ನಮಗೇ ಪರಿಚಯವಿಲ್ಲದ ಅಂತೆ-ಕಂತೆಗಳ ಕತೆಯಾಗಿಹೋಗಿದೆ. ಈ ಪರಿಸ್ಥಿತಿಯನ್ನು ಬದಲಿಸಲು, ಕನ್ನಡ ಸಂಸ್ಕೃತಿಯ ಬಗ್ಗೆ ಒಂದಷ್ಟು ಅಮೂಲ್ಯ ಮಾಹಿತಿಯನ್ನು ಅರಿತುಕೊಳ್ಳಲು, ನಮ್ಮ ಸಂಸ್ಕೃತಿಯ ಬಗ್ಗೆ ಹೆಮ್ಮೆಪಡಲು ಅನುವುಮಾಡಿಕೊಡುವ ಪುಟ್ಟ ಪುಸ್ತಕ ಡಾ. ಚಿದಾನಂದಮೂರ್ತಿಯವರ ’ಕನ್ನಡ ಸಂಸ್ಕೃತಿ: ನಮ್ಮ ಹೆಮ್ಮೆ.’ ಅರ್ಧಗಂಟೆಯಲ್ಲಿ ಓದಿ ಮುಗಿಸಬಹುದಾದ ಈ ಪುಸ್ತಕ ಈಗಾಗಲೇ ಹನ್ನೆರಡು ಮುದ್ರಣ ಕಂಡಿದ್ದು ಐವತ್ತು ಸಾವಿರಕ್ಕೂ ಹೆಚ್ಚು ಪ್ರತಿಗಳು ಮಾರಾಟವಾಗಿವೆ. ಅನೇಕ ಭಾರತೀಯ ಭಾಷೆಗಳಿಗೆ ಅನುವಾದ ಕೂಡ ಆಗಿದೆ.

ಈ ಅಮೂಲ್ಯ ಪುಸ್ತಕವನ್ನು ನೀವೂ ಕೊಂಡು ಓದಿ; ಆತ್ಮೀಯರಿಗೆ ಉಡುಗೊರೆಯಾಗಿ ನೀಡಿ; ನಿಮ್ಮ ಮನೆಯ ಸಮಾರಂಭಗಳಲ್ಲಿ ತಾಂಬೂಲದ ಜೊತೆ ಕೊಡಿ - ನಮ್ಮ ಸಂಸ್ಕೃತಿ ನಿಜಕ್ಕೂ ನಮ್ಮ ಹೆಮ್ಮೆಯಾಗುವಂತೆ ಮಾಡಿ!

ಪುಸ್ತಕದ ಹೆಸರು: ಕನ್ನಡ ಸಂಸ್ಕೃತಿ: ನಮ್ಮ ಹೆಮ್ಮೆ
ಲೇಖಕರು: ಡಾ. ಎಂ. ಚಿದಾನಂದಮೂರ್ತಿ
ಪುಟಗಳು: ೪೮ ಬೆಲೆ: ಹತ್ತು ರೂಪಾಯಿಗಳು ಮಾತ್ರ
ಪ್ರಕಾಶಕರು: ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಭವನ, ಜೆ ಸಿ ರಸ್ತೆ, ಬೆಂಗಳೂರು - ೦೨

ಈ ರಾಜ್ಯೋತ್ಸವದ ತಿಂಗಳಲ್ಲಿ ಹೀಗೊಂದು ಪ್ರತಿಜ್ಞೆಮಾಡಿ - ಕನ್ನಡ ಪುಸ್ತಕಗಳನ್ನು ಕೊಂಡು ಓದಿ!


ಕನ್ನಡದ ಮೊದಲ ಇ-ಪತ್ರಿಕೆ ವಿಶ್ವಕನ್ನಡ ಈ ಪುಸ್ತಕವನ್ನು ಹುಡುಕಿ ಕೊಂಡುತಂದು ಓದಲಾಗದವರಿಗಾಗಿ ಇದರ ಆನ್‍ಲೈನ್ ಆವೃತ್ತಿಯನ್ನು ಪ್ರಕಟಿಸಿದೆ: ಭಾಗ ೧ ಭಾಗ ೨ ಭಾಗ ೩ ಭಾಗ ೪ ಭಾಗ ೫

You Might Also Like

0 Responses

Popular Posts

Like us on Facebook