ರೀಟೆಲ್, ರೀಮಿಕ್ಸ್, ರೀಜಾಯ್ಸ್ ೨೦೨೦: ಕತೆಯೊಂದನ್ನು ಕನ್ನಡಕ್ಕೆ ತನ್ನಿ!

12:05 PM


ಮಕ್ಕಳಿಗಾಗಿ ವಿನೂತನ ಕತೆಗಳನ್ನು ಪ್ರಕಟಿಸುವ ಮೂಲಕ ಹೆಸರುವಾಸಿಯಾಗಿರುವುದು ಪ್ರಥಮ್ ಬುಕ್ಸ್ ಸಂಸ್ಥೆ. ತನ್ನ ಬಹುತೇಕ ಪ್ರಕಟಣೆಗಳನ್ನು 'ಸ್ಟೋರಿವೀವರ್' ಆನ್‌ಲೈನ್ ವೇದಿಕೆಯ ಮೂಲಕ ಉಚಿತವಾಗಿ ನೀಡುತ್ತಿರುವ ಈ ಸಂಸ್ಥೆ, ಇದೀಗ ಅದೇ ವೇದಿಕೆಯನ್ನು ಬಳಸಿಕೊಂಡು ವಿನೂತನ ಸ್ಪರ್ಧೆಯೊಂದನ್ನು ಆಯೋಜಿಸಿದೆ. 

'ರೀಟೆಲ್, ರೀಮಿಕ್ಸ್, ರೀಜಾಯ್ಸ್ ೨೦೨೦' ಎಂಬ ಹೆಸರಿನ ಈ ಸ್ಪರ್ಧೆಯಲ್ಲಿ ಯಾರು ಬೇಕಾದರೂ ಭಾಗವಹಿಸಬಹುದು. ಕುತೂಹಲಕರ ಮಕ್ಕಳ ಕತೆಗಳನ್ನು ನಮ್ಮ ಭಾಷೆಗೆ ಅನುವಾದಿಸಬೇಕು ಎನ್ನುವುದು ಈ ಸ್ಪರ್ಧೆಯ ಹೂರಣ. ಈ ನಮೂನೆಯನ್ನು (https://bit.ly/RRR_Contest) ತುಂಬಿಸಿ, ನಮ್ಮ ಆಯ್ಕೆಯ ಭಾಷೆಯನ್ನು ತಿಳಿಸಿದರೆ ನಾವು ಅನುವಾದಿಸಬೇಕಾದ ಕತೆಯನ್ನು ಪ್ರಥಮ್ ಬುಕ್ಸ್ ಸೂಚಿಸಲಿದೆ. ಒಂದಕ್ಕಿಂತ ಹೆಚ್ಚು ಕತೆಗಳನ್ನು ಒಂದಕ್ಕಿಂತ ಹೆಚ್ಚು ಭಾಷೆಗಳಿಗೆ ಅನುವಾದಿಸುವ ಅವಕಾಶವೂ ಇದೆ.

ನೋಂದಾಯಿಸಿಕೊಳ್ಳಲು ಮತ್ತು ಈ ಸ್ಪರ್ಧೆಯಲ್ಲಿ ಭಾಗವಹಿಸಲು ಮೇ ೨೦, ೨೦೨೦ರವರೆಗೆ ಸಮಯಾವಕಾಶ ಇದೆ. ನಾವು ಮಾಡಿದ ಅನುವಾದವನ್ನೇ ಈ ಸ್ಪರ್ಧೆಗೆ ಸಲ್ಲಿಸಬೇಕು. ಅತ್ಯುತ್ತಮವಾಗಿ ಅನುವಾದಿಸಿದವರಿಗೆ ಪ್ರಥಮ್ ಬುಕ್ಸ್ ಪರಿಣತರಿಂದ ಹೆಚ್ಚಿನ ತರಬೇತಿ ಹಾಗೂ ತಾವು ಅನುವಾದಿಸಿದ ಪುಸ್ತಕದ ಮುದ್ರಿತ ಪ್ರತಿ ದೊರಕಲಿದೆ.

ಈ ಸ್ಪರ್ಧೆಯ ಅಂಗವಾಗಿ ಸಿದ್ಧವಾಗುವ ಎಲ್ಲ ಅನುವಾದಗಳನ್ನೂ ಸ್ಟೋರಿವೀವರ್ ವೇದಿಕೆಯಲ್ಲಿ CC BY 4.0 ಮುಕ್ತ ಪರವಾನಗಿಯಡಿ ಪ್ರಕಟಿಸಲಾಗುವುದು.


ಹೆಚ್ಚಿನ ವಿವರಗಳಿಗೆ ಈ ಕೊಂಡಿಗಳ ಮೇಲೆ ಕ್ಲಿಕ್ ಮಾಡಿ:
ಸ್ಪರ್ಧೆಯ ವಿವರಗಳು: https://bit.ly/RRR2020_Blog
ನೋಂದಣಿ ನಮೂನೆ:  https://bit.ly/RRR_Contest
ಸ್ಟೋರಿವೀವರ್: https://storyweaver.org.in/

You Might Also Like

0 Responses

Popular Posts

Like us on Facebook