ಶ್ರೀನಿಧಿಯ ಪ್ರಪಂಚಕ್ಕೆ ಐದು

12:01 AM

ಅಂತರಜಾಲದ ಲೋಕದಲ್ಲಿ ನನ್ನದೂ ಒಂದು ತಾಣ ಇರಬೇಕು ಎನ್ನುವುದು ನನ್ನ ಬಹುದಿನಗಳ ಆಸೆ. ಫ್ರೀಸರ್ವರ್ಸ್‌ನಲ್ಲಿ, ಟ್ರೈಪಾಡ್‌ನಲ್ಲಿ - ಹೀಗೆ ಹತ್ತಾರು ಕಡೆ ವೆಬ್ ಪುಟಗಳನ್ನು ರೂಪಿಸುವ ಹುಚ್ಚು ಕಾಲೇಜು ದಿನಗಳಿಂದಲೂ ಇತ್ತು. ಮೊದಮೊದಲು ಬ್ಲಾಗಿಂಗ್‌ನ ಗಾಳಿ ಬೀಸಿದಾಗ ೨೦೦೫ರಲ್ಲೇ ಒಂದು ಬ್ಲಾಗನ್ನೂ ಶುರುಮಾಡಿದ್ದೆ; ಆದರೆ ಅದು ಜಾಸ್ತಿ ದಿನ ಬದುಕಿರಲಿಲ್ಲ ಅಷ್ಟೆ!

ನಂತರ, ೨೦೦೬ನೇ ಇಸವಿಯಲ್ಲಿ ಮನೆಗೆ ಬ್ರಾಡ್‌ಬ್ಯಾಂಡ್ ಸೌಲಭ್ಯ ಬಂದ ಮೇಲೆ, ನನ್ನ ಲೇಖನಗಳನ್ನೆಲ್ಲ ಅಂತರಜಾಲದಲ್ಲಿ ಒಂದು ಕಡೆ ಸಂಗ್ರಹಿಸಿಡಬೇಕು ಎನ್ನುವ ಸರಳ ಉದ್ದೇಶದೊಡನೆ ಪ್ರಾರಂಭವಾದದ್ದು ಶ್ರೀನಿಧಿಯ ಪ್ರಪಂಚ. ಮುಂದಿನ ದಿನಗಳಲ್ಲಿ ಲೇಖನಗಳಷ್ಟೇ ಅಲ್ಲದೆ ನಾನು ತೆಗೆದ ಛಾಯಾಚಿತ್ರಗಳನ್ನು, ಅನಿಸಿಕೆ-ಅನುಭವಗಳನ್ನು ಹಂಚಿಕೊಳ್ಳಲೂ ಇದೊಂದು ವೇದಿಕೆಯಾಯಿತು.

ಇವತ್ತಿಗೆ ಈ ಬ್ಲಾಗು ಬ್ಲಾಗಮಂಡಲಕ್ಕೆ ಕಾಲಿಟ್ಟು ಐದು ವರ್ಷ. ಈ ಐದು ವರ್ಷಗಳಲ್ಲಿ ಬ್ಲಾಗ್ ಲೋಕ ನನ್ನ ಪ್ರಪಂಚವನ್ನು ಗಣನೀಯವಾಗಿ ವಿಸ್ತರಿಸಿದೆ, ಅನೇಕರ ಗೆಳೆತನ ಸಂಪಾದಿಸಿಕೊಟ್ಟಿದೆ. ಎರಡು ವರ್ಷಕ್ಕಿಂತ ಕಡಿಮೆ ಸಮಯದಲ್ಲಿ ಶ್ರೀನಿಧಿಯ ಪ್ರಪಂಚದಲ್ಲಿ ಆರು ಸಾವಿರಕ್ಕೂ ಹೆಚ್ಚು ವಿಸಿಟ್ಟುಗಳು, ಹೆಚ್ಚೂಕಡಿಮೆ ಹನ್ನೆರಡು ಸಾವಿರ ಪೇಜ್-ವ್ಯೂಗಳು ದಾಖಲಾಗಿವೆ.

ಶ್ರೀನಿಧಿಯ ಪ್ರಪಂಚವನ್ನು ಮೆಚ್ಚಿಕೊಂಡಿರುವ, ಬೆನ್ನುತಟ್ಟಿ ಬೆಳೆಸಿರುವ ನಿಮ್ಮೆಲ್ಲರಿಗೂ ಹೃತ್ಪೂರ್ವಕ ಕೃತಜ್ಞತೆಗಳು.

You Might Also Like

5 Responses

Popular Posts

Like us on Facebook