ಕ್ಲಿಕ್ ಮಾಡಿ ನೋಡಿ!

10:58 PM

ಡಿಜಿಟಲ್ ಫೋಟೋಗ್ರಫಿ ಕುರಿತ 'ಕ್ಲಿಕ್ ಮಾಡಿ ನೋಡಿ!', ನನ್ನ ಹತ್ತನೆಯ ಪುಸ್ತಕ. ನವಕರ್ನಾಟಕ ಪ್ರಕಾಶನ ಪ್ರಕಟಿಸಿರುವ ಈ ಕೃತಿ ಛಾಯಾಗ್ರಹಣ ನಡೆದುಬಂದ ದಾರಿಯ ಪರಿಚಯದಿಂದ ಡಿಜಿಟಲ್ ಕ್ಯಾಮೆರಾ ತಂತ್ರಜ್ಞಾನದ ಪಕ್ಷಿನೋಟದವರೆಗೆ, ಛಾಯಾಗ್ರಹಣಕ್ಕೆ ಸಂಬಂಧಪಟ್ಟ ಪರಿಕಲ್ಪನೆಗಳ ಪರಿಚಯದಿಂದ ಕ್ಯಾಮೆರಾ ಕೊಳ್ಳುವಾಗ ನೆನಪಿಟ್ಟುಕೊಳ್ಳಬೇಕಾದ ಅಂಶಗಳವರೆಗೆ ಅನೇಕ ವಿಷಯಗಳತ್ತ ಗಮನಹರಿಸುತ್ತದೆ.

ಫೋಟೋ ಎಡಿಟಿಂಗ್ ಸುಲಭಸೂತ್ರಗಳು, ಮೆಮೊರಿ ಕಾರ್ಡ್ ಕೈಕೊಟ್ಟಾಗ ನಮ್ಮ ಚಿತ್ರಗಳನ್ನು ಮರಳಿ ಪಡೆಯಲು ಅನುಸರಿಸಬೇಕಾದ ಕ್ರಮಗಳು, ಛಾಯಾಗ್ರಹಣದ ಅನೇಕ ಪರಿಕಲ್ಪನೆಗಳನ್ನು ಸ್ಪಷ್ಟಪಡಿಸುವ ಉದಾಹರಣೆಗಳು - ಹೀಗೆ ಇನ್ನೂ ಹಲವಾರು ಅಂಶಗಳು ಈ ಕೃತಿಯಲ್ಲಿವೆ. ವಿವಿಧ ಬಗೆಯ ಕ್ಯಾಮೆರಾಗಳಷ್ಟೇ ಅಲ್ಲದೆ ಎಚ್‌ಡಿ, ಥ್ರೀಡಿ ಮುಂತಾದ ತಂತ್ರಜ್ಞಾನಗಳನ್ನೂ ಈ ಕೃತಿ ಪರಿಚಯಿಸುತ್ತದೆ.

ಈ ಪುಸ್ತಕದ ಪ್ರತಿಗಳು ನಿಮ್ಮ ಸಮೀಪದ ನವಕರ್ನಾಟಕ ಮಳಿಗೆಯಲ್ಲಿ ಲಭ್ಯ. ಆನ್‌ಲೈನ್ ಶಾಪಿಂಗ್ ಮಾಡಬಯಸುವವರು ಫ್ಲಿಪ್‌ಕಾರ್ಟ್ ಹಾಗೂ ಸಪ್ನಾ ಆನ್‌ಲೈನ್‌ನಲ್ಲೂ ಈ ಪುಸ್ತಕವನ್ನು ಕೊಳ್ಳಬಹುದು.

ದೂರದರ್ಶನ ಚಂದನ ವಾಹಿನಿಯ 'ಥಟ್ ಅಂತ ಹೇಳಿ' ಕಾರ್ಯಕ್ರಮದಲ್ಲಿ ಡಾ. ನಾ. ಸೋಮೇಶ್ವರ ಅವರು ಈ ಪುಸ್ತಕವನ್ನು ಪರಿಚಯಿಸಿದ್ದು ಹೀಗೆ...

You Might Also Like

0 Responses

Popular Posts

Like us on Facebook