ತುಂಬಾ ತುಂಬಾ ತುಂಬಾ ಥ್ಯಾಂಕ್ಸು!
6:09 PMನನ್ನ 'ಇ-ಜ್ಞಾನ' ಬ್ಲಾಗಿನಲ್ಲಿ ಮುಂಚಿನಿಂದಲೂ ಒಂದು ಹಿಟ್ ಕೌಂಟರ್ ಇದೆ. ಆದರೆ ಶ್ರೀನಿಧಿಯ ಪ್ರಪಂಚದಲ್ಲಿ ಬಹಳ ದಿನ, ವರ್ಷ ನಾನು ಆ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ. ಶ್ರೀನಿಧಿಯ ಪ್ರಪಂಚಕ್ಕೆ ಹಿಟ್ ಕೌಂಟರ್ ಸೇರಿದ್ದು ತೀರಾ ಈಚೆಗೆ, ಎರಡು ತಿಂಗಳ ಹಿಂದೆಯಷ್ಟೇ.
ಆದರೆ ಇವತ್ತಿಗಾಗಲೇ ವಿಸಿಟ್-ಗಳ ಸಂಖ್ಯೆ ೫೦೦ ದಾಟಿದೆ, ಪೇಜ್ ವ್ಯೂಗಳು ಸಾವಿರ ದಾಟಿ ಮುಂದೆ ಹೋಗಿವೆ ಅಂತ ಸೈಟ್ ಮೀಟರ್ ವರದಿ ಹೇಳುತ್ತಿದೆ.
ಇಷ್ಟೊಂದು ಆತ್ಮೀಯರು ಶ್ರೀನಿಧಿಯ ಪ್ರಪಂಚದಲ್ಲಿದ್ದಾರೆ ಅಂತ ತಿಳಿದು ಖುಷಿಯಾಯಿತು. ಅವರಿಗೆಲ್ಲ ಧನ್ಯವಾದ ಹೇಳಬೇಕು ಅಂತಲೂ ಅನ್ನಿಸ್ತು.
ಹಾಗಾಗಿ ಈ ಪೋಸ್ಟು. ನಿಮಗೆಲ್ಲ ತುಂಬಾ ತುಂಬಾ ತುಂಬಾ ತುಂಬಾ ಥ್ಯಾಂಕ್ಸು!!!
4 Responses