ಬಾನಂಗಳದತ್ತ ಕಣ್ಣುಗಳು

8:54 PM


ದೂರದರ್ಶಕದ ಆವಿಷ್ಕಾರವಾಗಿ ನಾನ್ನೂರು ವರ್ಷಗಳು ಪೂರ್ಣವಾದ ಸಂದರ್ಭದಲ್ಲಿ ಯುರೋಪಿಯನ್ ಸ್ಪೇಸ್ ಏಜೆನ್ಸಿ, ಇಂಟರ್‌ನ್ಯಾಷನಲ್ ಆಸ್ಟ್ರನಾಮಿಕಲ್ ಯೂನಿಯನ್ ಹಾಗೂ ಯುರೋಪಿಯನ್ ಸದರ್ನ್ ಅಬ್ಸರ್ವೇಟರಿಗಳ ಸಹಭಾಗಿತ್ವದಲ್ಲಿ 'Eyes on the Skies' ಎಂಬ ಚಲನಚಿತ್ರವನ್ನು ಸಿದ್ಧಪಡಿಸಲಾಗಿದೆ. ಒಟ್ಟು ಮೂವತ್ತಮೂರು ಭಾಷೆಗಳ ಸಬ್-ಟೈಟಲ್ ಹೊಂದಿರುವ ಇದು ಅಂತರರಾಷ್ಟ್ರೀಯ ಖಗೋಳವಿಜ್ಞಾನ ವರ್ಷದ ಅಧಿಕೃತ ಚಲನಚಿತ್ರವೂ ಹೌದು.

ಕನ್ನಡ ಸಬ್‌ಟೈಟಲ್ ಹೊಂದಿರುವ ಈ ಚಲನಚಿತ್ರದ ಡಿವಿಡಿ ಕಳೆದ ನವೆಂಬರ್‌ನಿಂದ  ಬೆಂಗಳೂರಿನ ಜವಾಹರ್‌ಲಾಲ್ ಪ್ಲಾನೆಟೇರಿಯಂ ಮೂಲಕ ಲಭ್ಯವಿದೆ. ’ಬಾನಂಗಳದತ್ತ ಕಣ್ಣುಗಳು’ ಎಂಬ ಹೆಸರಿನ ಈ ಚಲನಚಿತ್ರ ದೂರದರ್ಶಕದ ಇತಿಹಾಸ ಹಾಗೂ ಅದು ಬೆಳೆದುಬಂದ ದಾರಿಯನ್ನು ವಿವರಿಸುತ್ತದೆ. ಏಳು ಅಧ್ಯಾಯಗಳಿರುವ, ಒಟ್ಟು ಅರುವತ್ತು ನಿಮಿಷದ ಈ ಚಲನಚಿತ್ರದ ಬಗೆಗಿನ ಹೆಚ್ಚಿನ ವಿವರಗಳಿಗೆ ತಾರಾಲಯದ ಜಾಲತಾಣ ನೋಡಿ.  'Eyes on the Skies'ನ ಜಾಲತಾಣ ಇಲ್ಲಿದೆ

You Might Also Like

2 Responses

Popular Posts

Like us on Facebook