ಬಂತು ಬಂತು ಖಾದಿ ಸ್ಟಾಂಪು

8:00 AM

ವಿಶ್ವದ ಅನೇಕ ರಾಷ್ಟ್ರಗಳಲ್ಲಿ ಅಂಚೆಚೀಟಿ ಸಂಗ್ರಾಹಕರಿಗೆಂದೇ ಅಪರೂಪದ ಅಂಚೆಚೀಟಿಗಳನ್ನು ಆಗಿಂದಾಗ್ಗೆ ಹೊರತರಲಾಗುತ್ತದೆ. ವಿಭಿನ್ನ ಚಿತ್ರಗಳು, ಬೇರೆಬೇರೆ ಮಾಧ್ಯಮಗಳು, ವಿಶೇಷ ಲಕ್ಷಣಗಳನ್ನು ಹೊಂದಿರುವ ಈ ಅಂಚೆಚೀಟಿಗಳಲ್ಲಿ ಅಪಾರ ವೈವಿಧ್ಯವಿರುತ್ತದೆ. ಭಾರತ ಹೊರತಂದ ಗುಲಾಬಿ-ಮಲ್ಲಿಗೆ-ಶ್ರೀಗಂಧಗಳ ಸುವಾಸನೆಯುಳ್ಳ ಅಂಚೆಚೀಟಿಗಳು ಹಾಗೂ ಭೂತಾನ್ ದೇಶ ಹೊರಡಿಸಿದ ಸಿ.ಡಿ. ಅಂಚೆಚೀಟಿ - ಇವು ಇತ್ತೀಚಿನ ವರ್ಷಗಳಲ್ಲಿ ಸಾಕಷ್ಟು ಹೆಸರುಮಾಡಿದ್ದವು.

ಇದೀಗ ಇಂತಹ ಅಂಚೆಚೀಟಿಗಳ ಸಾಲಿಗೆ ಭಾರತದ ಖಾದಿ ಸ್ಟಾಂಪು ಕೂಡ ಸೇರಿಕೊಂಡಿದೆ. ಇತ್ತೀಚೆಗಷ್ಟೆ ನನ್ನ ಸಂಗ್ರಹ ಸೇರಿದ ಈ ಅಂಚೆಚೀಟಿಯ ಬಗೆಗೆ ನಾನು ಬರೆದ ಪುಟ್ಟದೊಂದು ಬರೆಹ ಮಾರ್ಚ್ ೨೪, ೨೦೧೧ರ ಸುಧಾದಲ್ಲಿ ಪ್ರಕಟವಾಗಿದೆ.

You Might Also Like

0 Responses

Popular Posts

Like us on Facebook