ಕಂಪ್ಯೂಟರ್ ಪ್ರಪಂಚ

12:00 AM

ನನ್ನ ಹೊಸ ಪುಸ್ತಕ 'ಕಂಪ್ಯೂಟರ್ ಪ್ರಪಂಚ' ನವಕರ್ನಾಟಕ ಪ್ರಕಾಶನದ ಮೂಲಕ ಈಗ ಮಾರುಕಟ್ಟೆಯಲ್ಲಿದೆ. 

ಈ ಪುಸ್ತಕದಲ್ಲಿ ಏನಿದೆ? ಹಿರಿಯ ವಿಜ್ಞಾನ ಲೇಖಕ ಶ್ರೀ ಟಿ. ಆರ್. ಅನಂತರಾಮುರವರು ಬರೆದಿರುವ ಮುನ್ನುಡಿಯ ಕೆಲ ಸಾಲುಗಳು ಇಲ್ಲಿವೆ:

"ಕಂಪ್ಯೂಟರ್ ಚರಿತ್ರೆಯಿಂದ ತೊಡಗಿ ಕ್ಯೂಆರ್ ಕೋಡ್‌ವರೆಗೆ ವಿಸ್ತರಿಸಿರುವ `ಕಂಪ್ಯೂಟರ್ ಪ್ರಪಂಚ' ಕಲಿಯಲು ಪ್ರೇರೇಪಿಸುವ ಹೊಸ ಮಾರ್ಗವೊಂದನ್ನು ಅನಾವರಣಗೊಳಿಸಿದೆ. ಬ್ಲಾಗ್ ತೆರೆಯಬೇಕೆ? ಇಮೇಲ್ ಮಾಡಬೇಕೆ? ಇಂಟರ್‌ನೆಟ್ ಬಗ್ಗೆ ಇಣುಕು ನೋಟಬೇಕೆ? ಕುರ್ಚಿಯಲ್ಲಿ ಅಲ್ಲಾಡದೆ ಕುಳಿತು ಕಂಪ್ಯೂಟರ್ ಪ್ರಪಂಚದಲ್ಲಿ ವಿಹರಿಸಲು ನೆರವಾಗುವ ಆತ್ಮೀಯ ಧಾಟಿಯಲ್ಲಿ ನಿಮಗೆ ಇನ್‌ಸ್ಟ್ರಕ್ಷನ್ಸ್‌ಗಳನ್ನು ಕೊಡುವ ಕೃತಿ `ಕಂಪ್ಯೂಟರ್ ಪ್ರಪಂಚ'.

ಖುಷಿಕೊಡುವ ಒಂದು ವಿಚಾರ - ಅನೇಕ ಅಧ್ಯಾಯಗಳಲ್ಲಿ ನಿಮಗೆ ಟಿಪ್ಸ್‌ಗಳಿವೆ. ವಿಶೇಷ ಮಾಹಿತಿಗಳಿವೆ. ಮೌಸ್ ಜನ್ಮತಾಳಿದ್ದು ಯಾವ ಘಳಿಗೆಯಲ್ಲಿ? ಕವಿ ಬೈರನ್ ಮಗಳು - ಅಡ, ಮೊದಲ ಕಂಪ್ಯೂಟರ್ ಪ್ರೋಗ್ರಾಮರ್ ಆದದ್ದು, ಮಾರ್ಕ್ ೨ ಕಂಪ್ಯೂಟರ್ ಪರೀಕ್ಷೆಯಲ್ಲಿ ನಿಜವಾದ ಮೊದಲ ಜೀವಂತ ಬಗ್ ಕಂಡದ್ದು; ಇಂಥ ಅಪರೂಪದ ಕುತೂಹಲಕಾರಿ ಮಾಹಿತಿಗಳಿವೆ."

ದೊಡ್ಡ ಗಾತ್ರದ (೧/೪ ಕ್ರೌನ್) ೧೧೨ ಪುಟಗಳಿರುವ ಈ ಪುಸ್ತಕದ ಬೆಲೆ ರೂ. ೧೨೦. ಮುಖಪುಟ ಚಿತ್ರರೂಪಿಸಿದ್ದು ಗೆಳೆಯ ಚೇತನ್ ಹಾಗೂ ನಾನು.

You Might Also Like

0 Responses

Popular Posts

Like us on Facebook