ಒಂದು ಮನವಿ
2:12 PMದಕ್ಷಿಣ ಕೊಡಗಿನ ಶ್ರೀಮಂಗಲದಲ್ಲಿರುವ ಶ್ರೀಮಂಗಲ ಪದವಿಪೂರ್ವ ಕಾಲೇಜು ಕಳೆದ ಐವತ್ತಾರು ವರ್ಷಗಳಿಂದ ಆ ಪ್ರದೇಶದಲ್ಲಿ ವಿದ್ಯೆಯ ಪ್ರಸಾರದಲ್ಲಿ ತನ್ನನ್ನು ತೊಡಗಿಸಿಕೊಂಡಿದೆ. ಈ ಸಂಸ್ಥೆಯಲ್ಲಿ ಎಂಟನೇ ತರಗತಿಯಿಂದ ದ್ವಿತೀಯ ಪಿಯುಸಿವರೆಗೆ ವಿದ್ಯಾಭ್ಯಾಸ ನಡೆಸುವ ಸೌಲಭ್ಯವಿದೆ. ಗ್ರಾಮೀಣ ಸಂಸ್ಥೆಯಾದರೂ ತನ್ನ ವಿದ್ಯಾರ್ಥಿಗಳಿಗೆ ಅತ್ಯುತ್ತಮ ಗುಣಮಟ್ಟದ ಶಿಕ್ಷಣ ಒದಗಿಸುವ ಉದ್ದೇಶವಿರುವ ಈ ಸಂಸ್ಥೆಯ ಹತ್ತನೆಯ ತರಗತಿ ಹಾಗೂ ದ್ವಿತೀಯ ಪಿಯುಸಿ ಫಲಿತಾಂಶಗಳು ಕ್ರಮವಾಗಿ ಶೇ ೭೫ ಹಾಗೂ ಶೇ ೮೫ರ ಆಸುಪಾಸಿನಲ್ಲಿರುವುದು ಗಮನಾರ್ಹ.
ಆರ್ಥಿಕವಾಗಿ ಹಿಂದುಳಿದ ತನ್ನ ವಿದ್ಯಾರ್ಥಿಗಳಿಗೆ ನೆರವಾಗುವ ಉದ್ದೇಶದಿಂದ ಈ ಸಂಸ್ಥೆ 'ವಿದ್ಯಾದಾಯಿನಿ' ನೆರವು ಯೋಜನೆಯನ್ನು ಕಳೆದ ಮೂರು ವರ್ಷಗಳಿಂದ ನಡೆಸಿಕೊಂಡು ಬಂದಿದೆ. ಈ ಯೋಜನೆಯಡಿ ರೂ. ೭೦೦ರ ದೇಣಿಗೆ ನೀಡುವ ಮೂಲಕ ನೀವು ಒಬ್ಬ ವಿದ್ಯಾರ್ಥಿಯ ಪುಸ್ತಕಗಳು ಹಾಗೂ ಸಮವಸ್ತ್ರದ ಖರ್ಚನ್ನು ವಹಿಸಿಕೊಳ್ಳಬಹುದು.
ಈ ಯೋಜನೆಗೆ ದೇಣಿಗೆನೀಡುವ ಹಾಗೂ/ಅಥವಾ ಈ ಸುದ್ದಿಯನ್ನು ನಿಮ್ಮ ಆಪ್ತರಿಗೆ ತಲುಪಿಸುವ ಮೂಲಕ ನಾನು ಓದಿದ ಶಾಲೆಗೆ ನೆರವಾಗಿ ಎಂಬುದು ನನ್ನ ಕೋರಿಕೆ. ಹೆಚ್ಚಿನ ವಿವರಗಳಿಗಾಗಿ srimysore [at] gmail [dot] comಗೆ ಒಂದು ಇ-ಮೇಲ್ ಕಳುಹಿಸಿ.
ಧನ್ಯವಾದಗಳು!
0 Responses