ಚಿಣ್ಣರಿಗೊಂದು ಚೆಂದದ ಪತ್ರಿಕೆ - ‘ಚಿಣ್ಣರ ಚೇತನ’
12:06 PMಕರ್ನಾಟಕ ಸರ್ಕಾರದ ಶಿಕ್ಷಣ ಇಲಾಖೆ, ಕೇಂದ್ರದ ಸರ್ವ ಶಿಕ್ಷಾ ಅಭಿಯಾನ ಹಾಗೂ ಅದಮ್ಯ ಚೇತನ ಸಂಸ್ಥೆಯ ಸಹಯೋಗದಲ್ಲಿ ‘ಚಿಣ್ಣರ ಚೇತನ’ ಎಂಬ ವಿಶಿಷ್ಟ ಗೋಡೆಪತ್ರಿಕೆ ಸಿದ್ಧವಾಗಿದೆ. ವಿಜ್ಞಾನ, ಆರೋಗ್ಯ, ಭಾಷಾಜ್ಞಾನ, ಪ್ರಚಲಿತ ವಿದ್ಯಮಾನ ಮುಂತಾದ ಅನೇಕ ವಿಷಯಗಳನ್ನು ಒಳಗೊಂಡ ಈ ಪತ್ರಿಕೆ ಪ್ರತಿ ತಿಂಗಳೂ ಕರ್ನಾಟಕ ರಾಜ್ಯದ ಸಾವಿರಾರು ಶಾಲೆಗಳ ಲಕ್ಷಾಂತರ ಮಕ್ಕಳನ್ನು ತಲುಪಲಿದೆ.
ಚಿಣ್ಣರ ಚೇತನದ ಮೊದಲ ಸಂಚಿಕೆ ಓದಲು ಚಿತ್ರದ ಮೇಲೆ ಕ್ಲಿಕ್ ಮಾಡಿ. ಇದೇ ಸಂಚಿಕೆಯ ಪಿಡಿಎಫ್ ರೂಪ ಅದಮ್ಯ ಚೇತನದ ಜಾಲತಾಣದಲ್ಲಿ ಲಭ್ಯವಿದೆ. ಪತ್ರಿಕೆಯ ಬಗ್ಗೆ ನಿಮ್ಮ ಅನಿಸಿಕೆ-ಅಭಿಪ್ರಾಯಗಳಿಗೆ ಸ್ವಾಗತ.
1 Responses