ವರುಷ ಆರು...

10:20 AM

ಈ ತಾಣದಲ್ಲಿ ಬ್ಲಾಗಿಸಲು ಶುರುಮಾಡಿ ಇವತ್ತಿಗೆ ಆರು ವರ್ಷ. ಕಳೆದ ಆರು ವರ್ಷಗಳಲ್ಲಿ ಈ ಹವ್ಯಾಸ ಬೇಕಾದಷ್ಟನ್ನು ದೊರಕಿಸಿಕೊಟ್ಟಿದೆ. ಹೊಸ ಮಿತ್ರರ ಪರಿಚಯ, ಹೊಸ ಅವಕಾಶಗಳು, ನನ್ನ ಬರೆವಣಿಗೆಗೆ ಪ್ರತಿಕ್ರಿಯೆ, ಚಿತ್ರಗಳಿಗೆ ಮೆಚ್ಚುಗೆ - ಹೀಗೆ ಈ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.

ಆಕೃತಿ ಪುಸ್ತಕದ ಗುರುಪ್ರಸಾದರೊಡನೆ ಸೇರಿ ಕಳೆದ ವರ್ಷ ಹೊರತಂದ 'ತಿನ್ನಲಾಗದ ಬಿಸ್ಕತ್ತು ನುಂಗಲಾಗದ ಟ್ಯಾಬ್ಲೆಟ್ಟು' ಪುಸ್ತಕಕ್ಕೆ ಖುಷಿಕೊಡುವ ಮಟ್ಟದ ಪ್ರತಿಕ್ರಿಯೆ ಸಿಕ್ಕಿದೆ. ಮೊತ್ತಮೊದಲ ಬಾರಿಗೆ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿದ, ಮಾತನಾಡಿದ ಅನುಭವ ದೊರೆತದ್ದೂ ಇದೇ ವರ್ಷದಲ್ಲಿ.

ಒಟ್ಟಿನಲ್ಲಿ ಶ್ರೀನಿಧಿಯ ಪ್ರಪಂಚದ ಈ ಆರು ವರ್ಷಗಳು ಮರೆಯಲಾಗದ ನೆನಪುಗಳನ್ನು ಕೊಟ್ಟಿವೆ, ಮರೆಯಬಾರದ ಪಾಠಗಳನ್ನೂ ಕಲಿಸಿವೆ.

ಅವೆಲ್ಲವುದಕ್ಕಾಗಿ ನಾನು ಕೃತಜ್ಞ.

ವಿಶ್ವಾಸದಿಂದ,
ಶ್ರೀನಿಧಿ

You Might Also Like

1 Responses

Popular Posts

Like us on Facebook