ಹೊಯ್ಸಳರ ಗುಂಗಿನಲ್ಲಿ...
1:46 AMಹೊಯ್ಸಳ ರಾಜವಂಶವನ್ನು ಕುರಿತ ಕೃತಿಗಳಲ್ಲಿ ಶ್ರೀ ಸಿ. ಕೆ. ನಾಗರಾಜರಾಯರ ಐತಿಹಾಸಿಕ ಕಾದಂಬರಿಗಳಿಗೆ ಮಹತ್ವದ ಸ್ಥಾನವಿದೆ. ಎರಡು ಸಂಪುಟಗಳಲ್ಲಿ ಪ್ರಕಟವಾದ ಬೃಹತ್ ಕಾದಂಬರಿ 'ಪಟ್ಟಮಹಾದೇವಿ ಶಾನ್ತಲದೇವಿ'ಯಂತೂ magnum opus ಎನ್ನುವಂಥದ್ದು.
ನನ್ನ ಸೋದರಮಾವನ ಸಂಗ್ರಹದಲ್ಲಿದ್ದ ಈ ಕಾದಂಬರಿಯನ್ನು ಐದಾರು ವರ್ಷಗಳ ಹಿಂದೆ ಓದಿಮುಗಿಸಿದ್ದೆ. ಕೆಲಸಮಯದ ಹಿಂದೆ ಅಂಗಡಿಯಲ್ಲಿ ಕಂಡಾಗ ಕೊಂಡು ನನ್ನ ಸಂಗ್ರಹಕ್ಕೂ ಸೇರಿಸಿಕೊಂಡಿದ್ದೆ. ಇನ್ನೊಮ್ಮೆ ಓದುವ ಮುನ್ನ ನಾಗರಾಜರಾಯರ ಇತರ ಕಾದಂಬರಿಗಳನ್ನು ಓದೋಣವೆಂದು ನಮ್ಮಕ್ಕನ ಸಂಗ್ರಹದಲ್ಲಿದ್ದ 'ವೀರಗಂಗ ವಿಷ್ಣುವರ್ಧನ' ಹಾಗೂ ನಾನೇ ಯಾವಾಗಲೋ ಕೊಂಡಿದ್ದ 'ದಾಯಾದ ದಾವಾನಳ?' ಕೃತಿಗಳನ್ನು ಈಗಷ್ಟೇ ಓದಿಮುಗಿಸಿದೆ.
ಹೊಯ್ಸಳ ಸಾಮ್ರಾಜ್ಯದ ಮೂಲಸ್ಥಾನ ಸೊಸೆವೂರಿಗೆ (ಇಂದಿನ ಹೆಸರು ಅಂಗಡಿ, ಮೂಡಿಗೆರೆಯ ಸಮೀಪವಿದೆ) ಕಳೆದ ವರ್ಷ ಭೇಟಿಕೊಟ್ಟಿದ್ದ ನೆನಪು ಈ ಸಂದರ್ಭದಲ್ಲಿ ಮರುಕಳಿಸಿತು. ಆ ಭೇಟಿಯ ಕೆಲ ಚಿತ್ರಗಳು ಇಲ್ಲಿವೆ.
['ದಾಯಾದ ದಾವಾನಳ?' ನಂತರ ನಾಗರಾಜರಾಯರು 'ವೀರಬಲ್ಲಾಳ' ಎಂಬ ಕಾದಂಬರಿಯನ್ನು ಬರೆಯಬೇಕೆಂದಿದ್ದರಂತೆ / ಬರೆದಿದ್ದರಂತೆ. ಆ ಪುಸ್ತಕದ ಕುರಿತು ವಿವರಗಳು ಯಾರಿಗಾದರೂ ಗೊತ್ತಿದ್ದರೆ ದಯಮಾಡಿ ಹಂಚಿಕೊಳ್ಳಿ]
0 Responses