ಒಂದು ರೂಪಾಯಿ
10:13 PMಈವರೆಗೆ ವಾಟ್ಸ್‌ಆಪ್ ಮೆಸೇಜುಗಳಲ್ಲಷ್ಟೆ ಕಂಡಿದ್ದ ಹೊಚ್ಚಹೊಸ ಒಂದು ರೂಪಾಯಿಯ ನೋಟು ಇವತ್ತು ನನ್ನ ಸಂಗ್ರಹ ಸೇರಿದೆ. ಈ ನೆಪದಲ್ಲಿ ಹಳೆಯ ಒಂದು ರೂಪಾಯಿ ನೋಟುಗಳು ನೆನಪಾದವು.
ನಾಣ್ಯದ ವಿನ್ಯಾಸ ಬದಲಾದಂತೆ ನೋಟುಗಳ ಮೇಲೆ ಮುದ್ರಣವಾದ ಅವುಗಳ ಚಿತ್ರವೂ ಬದಲಾಗಿರುವುದನ್ನು ನೋಡಿದಿರಾ?
ಹೆಚ್ಚು ಮುಖಬೆಲೆಯ ನೋಟುಗಳ ಮೇಲೆ ಆರ್‌ಬಿಐ ಗವರ್ನರ್ ಸಹಿ ಇರುತ್ತದಲ್ಲ, ಒಂದು ರೂಪಾಯಿಯ ನೋಟಿನ ಮೇಲೆ ಸೈನು ಮಾಡುವುದು ಮಾತ್ರ ಹಣಕಾಸು ಇಲಾಖೆ ಕಾರ್ಯದರ್ಶಿಯವರ ಕೆಲಸ. ಅಂದಹಾಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಬದಲು 'ಗವರ್ನಮೆಂಟ್ ಆಫ್ ಇಂಡಿಯಾ' ಹೆಸರಿರುವುದೂ ಒಂದು ರೂಪಾಯಿ ನೋಟಿನಲ್ಲೇ!
[ಹಳೆಯ ನೋಟುಗಳ ಮೇಲೆ ಯಾರ್‍ಯಾರ ಸಹಿ ಇದೆ ಸರಿಯಾಗಿ ಗಮನಿಸಿ!]
0 Responses