ಜುಲೈ ೨೬, ೨೦೧೧ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ. ಓದಲು ಚಿತ್ರದ ಮೇಲೆ ಕ್ಲಿಕ್ ಮಾಡಿ. ಪಠ್ಯರೂಪಕ್ಕಾಗಿ ಇಜ್ಞಾನ ಡಾಟ್ ಕಾಮ್ ನೋಡಿ.
ಜುಲೈ ೧೩, ೨೦೧೧ರ ಪ್ರಜಾವಾಣಿಯಲ್ಲಿ ಪ್ರಕಟವಾದ ಲೇಖನ. ಪಠ್ಯರೂಪಕ್ಕಾಗಿ ಇಜ್ಞಾನ ಡಾಟ್ ಕಾಮ್ ನೋಡಿ.
ಜುಲೈ ೧೯, ೨೦೧೧ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ. ಓದಲು ಚಿತ್ರದ ಮೇಲೆ ಕ್ಲಿಕ್ ಮಾಡಿ. ಪಠ್ಯರೂಪಕ್ಕಾಗಿ ಇಜ್ಞಾನ ಡಾಟ್ ಕಾಮ್ ನೋಡಿ.
ಜುಲೈ ೧೨, ೨೦೧೧ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ. ಮುದ್ರಣದೋಷಗಳಿಲ್ಲದ ಪಠ್ಯರೂಪಕ್ಕಾಗಿ ಇಜ್ಞಾನ ಡಾಟ್ ಕಾಮ್ ನೋಡಿ.
ಜುಲೈ ೫, ೨೦೧೧ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ. ಮೈಸ್ಪೇಸ್-ಫೇಸ್ಬುಕ್-ಗೂಗಲ್ ಪ್ಲಸ್ ಎಲ್ಲವನ್ನೂ ದೃಷ್ಟಿಯಲ್ಲಿಟ್ಟುಕೊಂಡು ಬರೆದದ್ದು. ಪತ್ರಿಕೆಯವರೇಕೋ ಗೂಗಲ್ ಪ್ಲಸ್ ಎಂಬ ಶೀರ್ಷಿಕೆ ಕೊಟ್ಟಿದ್ದಾರೆ. ಆ ಶೀರ್ಷಿಕೆ ಲೇಖನಕ್ಕೆ ಅಷ್ಟಾಗಿ ಹೊಂದುವುದಿಲ್ಲ ಎನ್ನುವುದು ನನ್ನ ಅನಿಸಿಕೆ.
ಅಂತರಜಾಲ ಲೋಕದ ಸುದ್ದಿಮನೆಗೆ ಕಳೆದ ಕೆಲದಿನಗಳಿಂದ ಬಿಡುವೇ ಇಲ್ಲ; ಒಂದರ ಮೇಲೊಂದರಂತೆ ಹೊಸಹೊಸ ಸುದ್ದಿಗಳು ಬರುತ್ತಲೇ ಇವೆ.
ಇಂತಹ ಸುದ್ದಿಗಳಲ್ಲಿ ಅತ್ಯಂತ ಹೆಚ್ಚು ಸದ್ದು ಮಾಡಿದ್ದು ಪ್ರಾಯಶಃ ಗೂಗಲ್ ಪ್ಲಸ್ ಅನಾವರಣದ ವಿಷಯ. ಅದೇ ಸಮಯದಲ್ಲಿ ಕಾಣಿಸಿಕೊಂಡ, ಆದರೆ ಅಷ್ಟಾಗಿ ಪ್ರಚಾರಪಡೆಯದ, ಇನ್ನೊಂದು ಸುದ್ದಿ ಮೈಸ್ಪೇಸ್ ಡಾಟ್ ಕಾಮ್ ಮಾರಾಟದ ಕುರಿತದ್ದು. ಈವರೆಗೆ ಅತ್ಯಂತ ಕ್ಷಿಪ್ರಗತಿಯ ಬೆಳೆವಣಿಗೆ ಕಂಡಿರುವ ಫೇಸ್ಬುಕ್ ಜನಪ್ರಿಯತೆ ನಿಧಾನಕ್ಕೆ ಕಡಿಮೆಯಾಗುತ್ತಿರಬಹುದು ಎಂದು ಸಂದೇಹ ವ್ಯಕ್ತಪಡಿಸಿದ ಅಧ್ಯಯನವೊಂದರ ಸುದ್ದಿಯೂ ಅಲ್ಲಲ್ಲಿ ಕಾಣಿಸಿಕೊಂಡಿದೆ.
ಇವೆಲ್ಲವೂ ಸೋಷಿಯಲ್ ನೆಟ್ವರ್ಕ್ ಅಥವಾ ಸಮಾಜ ಜಾಲಗಳಿಗೆ ಸಂಬಂಧಪಟ್ಟ ಸುದ್ದಿಗಳು ಎನ್ನುವುದು ವಿಶೇಷ.