ಕ್ರೆಡಿಟ್ ಕಾರ್ಡ್ ಮತ್ತು ಕಾಗದ

ಕ್ರೆಡಿಟ್ ಕಾರ್ಡು - ಡೆಬಿಟ್ ಕಾರ್ಡುಗಳ ಬಳಕೆ ಜಾಸ್ತಿಯಾದಂತೆ ನಮ್ಮ ಪರ್ಸಿನಲ್ಲಿ ಕಾರ್ಡಿನ ರಸೀತಿಗಳ (ಚಾರ್ಜ್ ಸ್ಲಿಪ್) ಸಂಖ್ಯೆಯೂ ಜಾಸ್ತಿಯಾಗುತ್ತಿದೆ. ತಮಾಷೆಯ ವಿಷಯವೆಂದರೆ ಕಾರ್ಡ್ ಉಜ್ಜಿದ ತಕ್ಷಣ ಮೊಬೈಲಿನಲ್ಲಿ ಎಸ್ಸೆಮ್ಮೆಸ್ ಸಂದೇಶ ಬಂದುಬಿಡುವುದರಿಂದ ಬಹಳಷ್ಟು ಸನ್ನಿವೇಶಗಳಲ್ಲಿ ನಮಗೆ ಈ ಕಾಗದದ ಚೂರಿನ ಅಗತ್ಯವೇ ಇಲ್ಲ. ಒಂದು ಚಾರ್ಜ್ ಸ್ಲಿಪ್ ಸುಮಾರು ೫೦ ಚದರ ಸೆಂಟೀಮೀಟರ್ ಕಾಗದ ಬಳಸುತ್ತದೆ ಎಂದಿಟ್ಟುಕೊಂಡರೆ ಅದು ನಮಗೆ ಬೇಡವೆಂದು ಹೇಳುವ ಮೂಲಕ ಎಷ್ಟು ಕಸ ಉತ್ಪಾದನೆಯಾಗುವುದನ್ನು ತಡೆಯುತ್ತಿದ್ದೇವೆ, ಎಷ್ಟು ಕಾಗದ ಉಳಿಸುತ್ತಿದ್ದೇವೆ ಒಮ್ಮೆ ಯೋಚಿಸಿ. ಕಾರ್ಡ್ ಉಜ್ಜುವಾಗಲೆಲ್ಲ "ಚಾರ್ಜ್ ಸ್ಲಿಪ್ ಪ್ರತಿ ನನಗೆ ಬೇಡ" ಎಂದು ಅಂಗಡಿಯವರಿಗೆ ಹೇಳುವುದನ್ನೂ ಮರೆಯಬೇಡಿ!

ಇನ್ನಷ್ಟು:

  • ಒಂದು ಚೂರು ಕಾಗದಕ್ಕೆ ಇಷ್ಟೆಲ್ಲ ತಲೆಬಿಸಿ ಯಾಕೆ ಎನ್ನುವವರಿಗೆ: ಮಾರ್ಚ್ ೨೦೧೬ ಒಂದೇ ತಿಂಗಳ ಅಂಕಿ ಅಂಶಗಳ ಪ್ರಕಾರ ನಮ್ಮ ದೇಶದಲ್ಲಿ ೧೮.೫ ಕೋಟಿಯಷ್ಟು ಕ್ರೆಡಿಟ್ ಕಾರ್ಡ್ / ಡೆಬಿಟ್ ಕಾರ್ಡ್ 'ಪಾಯಿಂಟ್ ಆಫ್ ಸೇಲ್' ವಹಿವಾಟುಗಳು ದಾಖಲಾಗಿವೆ (ಆಕರ: https://www.rbi.org.in/scripts/ATMView.aspx). ಇದರಲ್ಲಿ ಕೇವಲ ಅರ್ಧದಷ್ಟು ಸನ್ನಿವೇಶಗಳಲ್ಲಿ ಗ್ರಾಹಕರು ಚಾರ್ಜ್ ಸ್ಲಿಪ್ ಪಡೆದಿದ್ದರೂ ಎಷ್ಟು ಕಾಗದ ಬಳಕೆಯಾಗಿರಬಹುದು?  
  • ಕಚೇರಿಯ ದಾಖಲೆ ಇತ್ಯಾದಿಗಾಗಿ ನಿಮಗೆ ಚಾರ್ಜ್ ಸ್ಲಿಪ್ ಬೇಕಾದ ಸನ್ನಿವೇಶಗಳಲ್ಲಿ ಈ ಸಲಹೆ ಅನ್ವಯವಾಗುವುದಿಲ್ಲ :)

A trip along the coast


A perfect vacation will always be on everyone's wish list, but making that a reality is somewhat difficult. Planning and execution of a good vacation is always a challenge. And this holds good for almost any sort of vacation, not just for a hugely expensive trip to some exotic "foreign" location.

In fact, planning a trip to nearby locations can pose a bigger challenge. Like what happened to us.

A trip along the coastal area of Karnataka is always very special, for a variety of reasons. Traveling in this region simply means that you get a unique opportunity to experience a variety of things - scenic beauty of the Ghats, beaches, temples, cities and good food! This is exactly the reason why our family loves visiting this region, and I can remember many trips right from the time I was in school. 

This time, we wanted to go there once more.

ವಿಜಯವಾಣಿಯಲ್ಲಿ ಹೊಸದೊಂದು ಅಂಕಣ

ಸಾಪ್ತಾಹಿಕ ಅಂಕಣ, ಮಾಸಿಕ ಅಂಕಣಗಳ ನಂತರ ದೈನಿಕ ಅಂಕಣದ ಪ್ರಯೋಗ ಈಗ. ನನ್ನ ಅಂಕಣ 'eಜ್ಞಾನ' ಇಂದಿನಿಂದ (ಏ. ೨೧, ೨೦೧೬) ವಿಜಯವಾಣಿಯಲ್ಲಿ ಪ್ರತಿದಿನವೂ ಪ್ರಕಟವಾಗುತ್ತದೆ (ಪುರವಣಿ ವಿಭಾಗದಲ್ಲಿ). ತಂತ್ರಜ್ಞಾನ ಕ್ಷೇತ್ರದ ವಿವಿಧ ಸಂಗತಿಗಳ ಬಗ್ಗೆ ಸಂಕ್ಷಿಪ್ತವಾಗಿ ಮಾಹಿತಿ ನೀಡುವ ಪ್ರಯತ್ನ ಇದು. ನಿಮಗೆ ಇಷ್ಟವಾಗಬಹುದೆಂದು ಭಾವಿಸುತ್ತೇನೆ. ನಿಮ್ಮ ಅನಿಸಿಕೆ, ಅಭಿಪ್ರಾಯಗಳಿಗೆ ಸ್ವಾಗತ.

ಅಂಕಣ ಪ್ರಕಟಿಸುತ್ತಿರುವ, ಮೊದಲ ಕಂತಿನಲ್ಲಿ ನನ್ನ ಪರಿಚಯವನ್ನೂ ಪ್ರಕಟಿಸಿ ವಿಶ್ವಾಸತೋರಿರುವ ವಿಜಯವಾಣಿ ಬಳಗಕ್ಕೆ, ರಾಜಶೇಖರ ಹೆಗಡೆಯವರಿಗೆ ನನ್ನ ಕೃತಜ್ಞತೆಗಳು.

ಓದಿ: ವಿಜಯವಾಣಿಯಲ್ಲಿ ಇಜ್ಞಾನ 

ಒಂದು ರೂಪಾಯಿ


ಈವರೆಗೆ ವಾಟ್ಸ್‌ಆಪ್ ಮೆಸೇಜುಗಳಲ್ಲಷ್ಟೆ ಕಂಡಿದ್ದ ಹೊಚ್ಚಹೊಸ ಒಂದು ರೂಪಾಯಿಯ ನೋಟು ಇವತ್ತು ನನ್ನ ಸಂಗ್ರಹ ಸೇರಿದೆ. ಈ ನೆಪದಲ್ಲಿ ಹಳೆಯ ಒಂದು ರೂಪಾಯಿ ನೋಟುಗಳು ನೆನಪಾದವು.

ಹೊಯ್ಸಳರ ಗುಂಗಿನಲ್ಲಿ...

ಹೊಯ್ಸಳ ರಾಜವಂಶವನ್ನು ಕುರಿತ ಕೃತಿಗಳಲ್ಲಿ ಶ್ರೀ ಸಿ. ಕೆ. ನಾಗರಾಜರಾಯರ ಐತಿಹಾಸಿಕ ಕಾದಂಬರಿಗಳಿಗೆ ಮಹತ್ವದ ಸ್ಥಾನವಿದೆ. ಎರಡು ಸಂಪುಟಗಳಲ್ಲಿ ಪ್ರಕಟವಾದ ಬೃಹತ್ ಕಾದಂಬರಿ 'ಪಟ್ಟಮಹಾದೇವಿ ಶಾನ್ತಲದೇವಿ'ಯಂತೂ magnum opus ಎನ್ನುವಂಥದ್ದು.

ನನ್ನ ಸೋದರಮಾವನ ಸಂಗ್ರಹದಲ್ಲಿದ್ದ ಈ ಕಾದಂಬರಿಯನ್ನು ಐದಾರು ವರ್ಷಗಳ ಹಿಂದೆ ಓದಿಮುಗಿಸಿದ್ದೆ. ಕೆಲಸಮಯದ ಹಿಂದೆ ಅಂಗಡಿಯಲ್ಲಿ ಕಂಡಾಗ ಕೊಂಡು ನನ್ನ ಸಂಗ್ರಹಕ್ಕೂ ಸೇರಿಸಿಕೊಂಡಿದ್ದೆ. ಇನ್ನೊಮ್ಮೆ ಓದುವ ಮುನ್ನ ನಾಗರಾಜರಾಯರ ಇತರ ಕಾದಂಬರಿಗಳನ್ನು ಓದೋಣವೆಂದು ನಮ್ಮಕ್ಕನ ಸಂಗ್ರಹದಲ್ಲಿದ್ದ 'ವೀರಗಂಗ ವಿಷ್ಣುವರ್ಧನ' ಹಾಗೂ ನಾನೇ ಯಾವಾಗಲೋ ಕೊಂಡಿದ್ದ 'ದಾಯಾದ ದಾವಾನಳ?' ಕೃತಿಗಳನ್ನು ಈಗಷ್ಟೇ ಓದಿಮುಗಿಸಿದೆ.

From good to gold, it is all in our hands!

"ನಿದ್ದೆಗೊಮ್ಮೆ ನಿತ್ಯ ಮರಣ
ಎದ್ದ ಸಲ ನವೀನ ಜನನ
ನಮಗೆ ಏಕೆ ಬಾರದೋ"

These lines are from a poem called 'Yugaadi' by Jnanapeeth award winner Sri. Da. Ra. Bendre. Through these lines, the poet wonders why we are not reborn every time we wake up from sleep – so that we can start every day afresh, with a clean slate.

Even though such a thing would have been wonderful (don't you think so?), there is hardly anything that we can do to make it happen in the real world.

But to think that every morning is a new birth? Wouldn't that be a great way to start the day with loads of freshness?

Read this: “Every morning we are born again. What we do today is what matters most.”

Nope, I did not come up with this inspirational statement. Gautama Buddha did, apparently.

How can we make sure that every morning is so fresh for us, that we can face life with full energy for 12-18 hours?

Hoping that we have a "good" morning does not really suffice. At least that is what I think.  

So what can we do to turn good mornings into Gold Mornings?

ನನ್ನ ಹೊಸ ಪುಸ್ತಕ ಇದೀಗ ಲಭ್ಯ: 'ಕಂಪ್ಯೂಟರ್‌ಗೆ ಪಾಠ ಹೇಳಿ...'

ಪುಸ್ತಕ ಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ
ಸುಮಾರು ಹದಿನೈದು ವರ್ಷಗಳ ಹಿಂದೆ, ವಿಜ್ಞಾನ ಬರವಣಿಗೆ ಶುರುಮಾಡಿದ ಹೊಸತರಲ್ಲಿ, ನನ್ನನ್ನು ಪ್ರಭಾವಿಸಿದ ಲೇಖಕರಲ್ಲೊಬ್ಬರು ಶ್ರೀ ಅಡ್ಯನಡ್ಕ ಕೃಷ್ಣಭಟ್. ಪ್ರೌಢಶಾಲೆಯಲ್ಲಿ ಬಹುಮಾನ ಬಂದಿದ್ದ 'ಬೆಳ್ಳಿಚಿಕ್ಕೆ' ಎನ್ನುವ ಅವರ ಪುಸ್ತಕವನ್ನು ಓದಿದ್ದೆ; ಅವರಂತೆಯೇ ಲೇಖನಗಳನ್ನು ಬರೆಯಲು ಪ್ರಯತ್ನಿಸಿದ್ದೆ.

ಪುಸ್ತಕಗಳು ಹಾಗೂ 'ಬಾಲವಿಜ್ಞಾನ'ದ ಮೂಲಕ ಕೃಷ್ಣಭಟ್ಟರ ಹೆಸರಿನ-ಬರಹದ ಪರಿಚಯ ನನಗಿದ್ದರೂ ಅವರನ್ನು ಮುಖತಃ ಭೇಟಿ ಮಾಡುವ ಅವಕಾಶ ಬಂದಿರಲಿಲ್ಲ.

ನಂತರದ ವರ್ಷಗಳಲ್ಲಿ ಅವರನ್ನು ಭೇಟಿಮಾಡುವ, ಅವರೊಡನೆ ಸಂಭಾಷಿಸುವ ಅನೇಕ ಅವಕಾಶಗಳು ನನ್ನ ಪಾಲಿಗೆ ದೊರೆತವು. ಕಲಬುರಗಿಯ ಶಿಬಿರವೊಂದರಲ್ಲಿ ಅವರೊಡನೆ ಎರಡು ದಿನ ಕಳೆದದ್ದಂತೂ ನಿಜಕ್ಕೂ ಮರೆಯಲಾಗದ ಅನುಭವ.  

ಇದೀಗ ಅವರ ಮಾರ್ಗದರ್ಶನದಲ್ಲಿ ನನ್ನದೊಂದು ಪುಸ್ತಕ ಸಿದ್ಧವಾಗಿ ಮಾರುಕಟ್ಟೆಗೆ ಬಂದಿದೆ. ಕಂಪ್ಯೂಟರ್ ವಿಜ್ಞಾನದ ಪ್ರಾಥಮಿಕ ಪಾಠಗಳನ್ನು ಪರಿಚಯಿಸುವ 'ಕಂಪ್ಯೂಟರ್‌ಗೆ ಪಾಠ ಹೇಳಿ...' ನವಕರ್ನಾಟಕ ಪ್ರಕಾಶನದ ಮೂಲಕ ಈಗ ಮಾರುಕಟ್ಟೆಯಲ್ಲಿದೆ.